ಅಲ್ಲಿ ಪ್ರತಿಷ್ಠಾಪನೆ ಇಲ್ಲಿಯೂ ಮೇಳೈಸಿದೆ ಸಂಭ್ರಮಾಚರಣೆ

decoration-in-bhatkal-Shamshuddeen-circle
Published on

ಕಾರವಾರ: ಅಯೋಧ್ಯೆಯ ಮಂದಿರದಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದೆ. ಆದರೆ, ಇಲ್ಲಿ ನಮ್ಮ ಜಿಲ್ಲೆಯಲ್ಲೂ ಮನೆ, ಮನೆಗಳಲ್ಲಿ, ಬೀದಿಗಳಲ್ಲೂ ಸಂಭ್ರಮದ ವಾತಾವರಣ ಮೇಳೈಸಿದೆ. ರಾಮ ಭಕ್ತಿಯ ಪರಾಕಾಷ್ಠೆಯ ವಾತಾವರಣ ಸೃಷ್ಟಿಯಾಗಿದೆ.

ಜಿಲ್ಲೆಯ ಬೀದಿ, ಬೀದಿಗಳು ಕೇಸರಿ ಧ್ವಜಗಳಿಂದ ತುಂಬಿವೆ. ದೊಡ್ಡ ಕಟ್ಟಡದೆತ್ತರದ ರಾಮನ ಕಟೌಟ್‌ಗಳು ರಾರಾಜಿಸುತ್ತವೆ. ಮನೆ, ಮನೆಗಳ ಮೇಲೆ ರಾಮ ಧ್ವಜ ಹಾರಾಡುತ್ತಿವೆ. ಅಂಗಡಿಗಳು, ಮಾಲ್‌ಗಳ ಎದುರೂ ಕೇಸರೀ ಧ್ವಜ ಹಾರಿಸಿ ವ್ಯಾಪಾರ ಮಾಡುತ್ತಿವೆ. ಜಿಲ್ಲೆಯ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ಜ.22 ರಂದು ರಾಮ ಭಜನೆ, ವಿಶೇಷ ಪೂಜೆ ಆಯೋಜಿಸಲಾಗಿದೆ. ಕೆಲವೆಡೆ ಅನ್ನ ಸಂತರ್ಪಣೆಯೂ ನಡೆಯಲಿದೆ. ಎಲ್ಲ ದೇವಾಲಯಗಳು, ಮಠಗಳನ್ನು ಹೂವು, ತಳಿರು, ತೋರಣಗಳಿಂದ ಶೃಂಗರಿಸಲಾಗಿದೆ. ಭಾನುವಾರವೇ ಬಹುತೇಕ ಊರುಗಳ ಬೀದಿಗಳು ಶೃಂಗಾರಗೊಂಡಿವೆ. ಮಾರುಕಟ್ಟೆಯಲ್ಲಿ ಕೇಸರಿ ಧ್ವಜ, ಹೂವು, ಹಣತೆಗಳ ಮಾರಾಟವೂ ಜೋರಾಗಿಯೇ ನಡೆಯಿತು.

ಶೋಭಾ ಯಾತ್ರೆ

Bike rally in karwar.

ಪ್ರಭು ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಶನಿವಾರ ಹಾಗೂ ಭಾನುವಾರ ಕಾರವಾರದ ವಿವಿಧೆಡೆ ಶೋಭಾ ಯಾತ್ರೆಗಳು ಜರುಗಿದವು. ಶನಿವಾರ ನಗರದ ಆಟೋ ರಿಕ್ಷಾ ನಿಲ್ದಾಣದ ಸದಸ್ಯರು ತಮ್ಮ ಆಟೋಗಳ ಮೇಲೆ ಕೇಸರಿ ಧ್ವಜ ಹಾರಿಸಿ ನಗರದಲ್ಲಿ ಮೆರವಣಿಗೆ ನಡೆಸಿದರು. ಭಾನುವಾರ ಬೆಳಗ್ಗೆ ಪತಂಜಲಿ ಯೋಗ ಸಮಿತಿಯ ನೂರಾರು ಸದಸ್ಯರು ಕೇಸರಿ ಬಟ್ಟೆ ತೊಟ್ಟು ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿದರು. ಮಾಲಾದೇವಿ ಮೈದಾನದಿಂದ ಹೊರಟ ಶೋಭಾ ಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಾಮ, ಸೀತೆ, ಲಕ್ಷ÷್ಮಣನ ವೇಷ ತೊಟ್ಟ ಮಕ್ಕಳು ಗಮನ ಸೆಳೆದರು. ಮಹಿಳೆಯರು ಕೇಸರಿ ಪೇಟ ತೊಟ್ಟು ರಾಮ ಭಜನೆ ಮಾಡಿದರು.
ಕೋಡಿಬಾಗದ ಯುವಕ ಸಂಘದ ಸದಸ್ಯರು ಶ್ರೀ ರಾಮನ ಬೃಹತ್ ಪೋಸ್ಟರ್ ಹಿಡಿದು ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿದರು. ಸದಾಶಿವಗಡದಲ್ಲಿ ಶೋಭಾ ಯಾತ್ರೆ ನಡೆಯಿತು.
prostration-in-karwar

ವಿವಿಧೆಡೆ ವಿಶೇಷ ಪೂಜೆ


ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಜ.22 ರಂದು ಜಿಲ್ಲೆಯ ವಿವಿಧೆಡೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರವಾರದ ಪುರಾಣ ಪ್ರಸಿದ್ಧ ಶೆಜ್ಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ದೀಪ ಅಲಂಕಾರದ ನಂತರ ಪೂಜೆ, ಪ್ರಸಾದ ವಿತರಣೆ ಜರುಗಲಿದೆ.
ಸುಂಕೇರಿ ರಾಮ ದೇವಸ್ಥಾನ:
ಸುಂಕೇರಿಯ ಶ್ರೀ ರಾಮ ದೇವಸ್ಥಾನದಲ್ಲಿ ಬೆಳಗ್ಗೆ 5 ರಿಂದ 7 ಗಂಟೆಯವರೆಗೆ ನಗರ ಸಂಕೀರ್ತನೆ ನಡೆಯಲಿದೆ. ರಾಮ ಮಂದಿರದಿAದ ಹೊರಟು, ಮರಾಠಾವಾಡಾ, ನಂದನಗದ್ದಾ, ಸುಂಕೇರಿ, ಸುಂಕೇರಿ ರಾಮನಾಥ ದೇವಸ್ಥಾನದಿಂದ ಪುನಃ ರಾಮಮಂದಿರಕ್ಕೆ ಬಂದು ತಲುಪುವುದು.
8 ಗಂಟೆಗೆ ರಾಮ ತಾರಕ ಹವನ ನಡೆಯಲಿದೆ. 10 ಗಂಟೆಗೆ ರಾಮ ರಕ್ಷಾ ಸ್ತೋತ್ರ ಹಾಗೂ ರಾಮನಾಮ ಜಪ ನಡೆಯಲಿದೆ. 11 ರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಯಿAದ ಭಜನಾ ಕಾರ್ಯಕ್ರಮ, 12.30 ರಿಂದ ಪೂಜೆ, ತೀರ್ಥ, ಪ್ರಸಾದ ವಿತರಣೆ, ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ. ಸಾಯಂಕಾಲ 4 ರಿಂದ ಮಹಿಳೆಯರಿಗೆ ಅಶಿರಿನ ಕುಂಕುಮ ಕಾರ್ಯಕ್ರಮ, 5 ರಿಂದ ಮಹಂತ ಭವೇಶಾನಂದ ಸ್ವಾಮೀಜಿ ಅವರಿಂದ ಪ್ರವಚನ, 5.30 ರಿಂದ ದೀಪೋತ್ಸವ, 6.30 ರಿಂದ ಭಜನಾ ಕಾರ್ಯಕ್ರಮ, ರಾತ್ರಿ 8 ರಿಂದ ಮಹಾ ಪೂಜೆ ಪಾನಕ ವಿತರಣೆ ನಡೆಯಲಿದೆ.
ಅನ್ನ ಸಂತರ್ಪಣೆ:
ಹಬ್ಬುವಾಡದ ಮಹಾ ಗಣಪತಿ ದೇವಸ್ಥಾನದಲ್ಲಿ ಬೆಳಗ್ಗೆ 11 ರಿಂದ 12 ಗಂಟೆಯವರೆಗೆ ಭಜನಾ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 12.ರಿಂದ 1.30 ರವರೆಗೆ ರಾಮ ಕಥಾವೃತ, ನಂತರ ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಟ್ರಸ್ಟ್ನಿಂದ ಅನ್ನ ಸಂತರ್ಪಣೆ ನಡೆಯಲಿದೆ. ನಂತರ 2.30 ರಿಂದ 7.25 ರವರೆಗೆ ಭಜನೆ, ರಾತ್ರಿ 8 ಗಂಟೆಗೆ ದೀಪೋತ್ಸವ ಮಹಾ ಪೂಜೆ ನಡೆಯಲಿದೆ.
ರಥ ಸಮರ್ಪಣೆ:
ಮಾಜಾಳಿಯ ರಾಮನಾಥ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ ರಥ ಸಮರ್ಪಣಾ ಕಾರ್ಯಕ್ರಮವು ಜ. 22 ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದೆ. ಅದಕ್ಕೂ ಪೂರ್ವದಲ್ಲಿ ಭಜನೆ. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.
ಚಿತ್ರಗಿ ಮಠದಲ್ಲಿ:
ಕುಮಟಾದ ಚಿತ್ರಗಿ ಮಠದಲ್ಲಿ ಜ.22 ರಂದು ವಿನಾಯಕ ಜೋಷಿ ಅವರ ನೇತೃತ್ವದಲ್ಲಿ 1008 ರಾಮ ತಾರಕ ಹವನ ಜರುಗಲಿದೆ. ಮಧ್ಯಾಹ್ನ 12.30 ಕ್ಕೆ ಶಂಖ ನಾದದೊಂದಿಗೆ ಮಹಾ ಮಂಗಳಾರತಿ ಜರುಗಲಿದೆ. ನಂತರ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗಿದೆ. ಸಾಯಂಕಾಲ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮ ಜರುಗಲಿದೆ.
ಕರ್ಕಿ ಮಠದಲ್ಲಿ
ಹೊನ್ನಾವರ ಕರ್ಕಿ ಮಠದಲ್ಲಿ ಬೆಳಗಿನಿಂದ ರಾಮ, ನಾಮ ಜಪ ಯಜ್ಞ, 11 ಗಂಟೆಯಿAದ 1008 ರಾಮ ತಾರಕ ಮಂತ್ರ ಹವನ ಜರುಗಲಿದೆ. 12 ಗಂಟೆಗೆ ಪೂರ್ಣಾಹುತಿ ಹಾಗೂ ನಂತರ ವಿದ್ವಾನರಿಂದ ರಾಮ ಮಂದಿರ ಹೋರಾಟದ ಬಗ್ಗೆ ಭಾಷಣ ನಡೆಯಲಿದೆ. 12.45 ಕ್ಕೆ ಹನುಮಾನ್ ಸಹಿತ ಸೀತಾ ರಾಮಚಂದ್ರ ದೇವರಿಗೆ ಮಹಾ ಮಂಗಳಾರತಿ ಜರುಗಲಿದೆ. ನಂತರ ಮಹಾ ಪ್ರಸಾದ ವಿತರಣೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net