More

    ಗೋವಾ ಗಡಿಯ ಸ್ಮಗ್ಲರ್ ಗಳಿಗೆ ಡ್ರೋನ್ ಭಯ!

    ಕಾರವಾರ: ಕರ್ನಾಟಕ-ಗೋವಾ ಗಡಿಯಲ್ಲಿ  ನಡೆಯುವ ಅಕ್ರಮ ಮದ್ಯ ಸಾಗಣೆ ದಂಧೆ ತಡೆಯಲು ಅಬಕಾರಿ ಇಲಾಖೆ ಹೊಸ ಉಪಾಯ ಮಾಡಿದೆ.

    ಡ್ರೋನ್ ಗಳನ್ನು ಬಳಸಿ, ಮದ್ಯ ಸಾಗಣೆದಾರರನ್ನು ಹಿಡಿಯಲು ಯೋಜನೆ ರೂಪಿಸಿ ಕಾರ್ಯ ಪ್ರವೃತ್ತವಾಗಿದೆ. ಅದರ ಪ್ರಯೋಗ ಈಗಾಗಲೇ ನಡೆದಿದ್ದು, ಅಧಿಕೃತ ಕಾರ್ಯ ನಿರ್ವಹಣೆ ಒದೆರಡು ದಿನದಲ್ಲಿ ನಡೆಯಲಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
    ಕಾರವಾರ ಗೋವಾ ಗಡಿಯ ಮುಡಗೇರಿ ಭಾಗದಲ್ಲಿ ಹಾಗೂ ಸಮುದ್ರ ಮಾರ್ಗದಲ್ಲಿ ಗುರುವಾರ ಹಾಗೂ ಶುಕ್ರವಾರ ಅಬಕಾರಿ ಅಧಿಕಾರಿಗಳು ಡ್ರೋನ್ ವಿಧಾನ ಬಳಸಿ ಒಂದಿಷ್ಟು ಅಕ್ರಮ ಸಾರಾಯಿ ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ. ಇದೇ ಮೊದಲ ಬಾರಿಗೆ ಅಬಕಾರಿ ಇಲಾಖೆ ಡ್ರೋನ್ ಕರ‍್ಯಾಚರಣೆ ಕೈಗೊಂಡಿದೆ.
    ಗೋವಾದಲ್ಲಿ ಮದ್ಯಕ್ಕೆ ಸುಂಕ ಕಡಿಮೆ ಇದೆ. ಹಾಗಾಗಿ ಅಲ್ಲಿ ಕಡಿಮೆ ಬೆಲೆಯಲ್ಲಿ ಮದ್ಯ ಲಭ್ಯವಾಗುತ್ತದೆ. ಗಡಿಯ ಕಾರವಾರ, ಜೊಯಿಡಾ ಮುಂತಾದ ತಾಲೂಕುಗಳಲ್ಲಿ ಗೋವಾ ಮದ್ಯ ಸಾಕಷ್ಟು ಪ್ರಮಾಣದಲ್ಲಿ ಅಕ್ರಮ ಸಾಗಣೆಯಾಗುತ್ತದೆ. ಇದನ್ನು ತಡೆಯಲು ಅಬಕಾರಿ ಇಲಾಖೆ ನಡೆಸುವ ಪ್ರಯತ್ನಗಳು ವಿಫಲವಾಗುತ್ತವೆ. ಏಕೆಂದರೆ ಕಾಡಿದ ದಾರಿಯಲ್ಲಿ ತಲೆ ಹೊರೆಯ ಮೇಲೆ, ಸಮುದ್ರ ಮಾರ್ಗದಲ್ಲಿ ಮದ್ಯ ಸಾಗಣೆಯಾಗುವುದರಿಂದ ತಡೆಯುವುದು ಇಲಾಖೆಗೆ ದೊಡ್ಡ ಸವಾಲು. ಇಲಾಖೆ ಅಧಿಕಾರಿಗಳು ಕಾಡಿನಲ್ಲಿ ಹುಡುಕುವ ಹೊತ್ತಿಗೆ ಅಕ್ರಮ ಸಾಗಣೆದಾರರು ನಾಪತ್ತೆಯಾಗುತ್ತಾರೆ.  ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಹೊಸ ಪ್ರಯತ್ನ ನಡೆಸಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಗಾಂಜಾ ಸೇವನೆ ಮಹಾರಾಷ್ಟ್ರದ ಇಬ್ಬರ ಮೇಲೆ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts