More

    ಗಾಂಜಾ ಬೆಳೆಯದಂತೆ ಡ್ರೋನ್ ಕಣ್ಗಾವಲು!

    ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನ ಜಾಲಹಳ್ಳಿ ವ್ಯಾಪ್ತಿಯಲ್ಲಿ ಪ್ರಯೋಗ

    ದೇವದುರ್ಗ: ತಾಲೂಕಿನಲ್ಲಿ ಅನಧಿಕೃತವಾಗಿ ಗಾಂಜಾ ಬೆಳೆಯುವವರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಡ್ರೋನ್ ಮೂಲಕ ಕಣ್ಗಾವಲು ಇಡಲು ಮುಂದಾಗಿದೆ. ಇದರ ಭಾಗವಾಗಿ ಶನಿವಾರ ಜಾಲಹಳ್ಳಿ ವ್ಯಾಪ್ತಿಯ ವಿವಿಧೆಡೆ ಡ್ರೋನ್ ಸಹಾಯದಿಂದ ಗಾಂಜಾ ಬೆಳೆದ ಬಗ್ಗೆ ಮಾಹಿತಿ ಪಡೆಯಲಾಯಿತು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ನಿರ್ದೇಶನದಂತೆ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡ್ರೋನ್ ಮೂಲಕ ಗಾಂಜಾ ಬೆಳೆ ಪರೀಕ್ಷೆ ಮಾಡಲಾಯಿತು. ಠಾಣೆ ವ್ಯಾಪ್ತಿಯ ಮಲ್ಲಾಪುರ, ಬೊಮ್ಮಲಗುಂಡ, ಡಿ.ಗಣೇಕಲ್, ಅಲ್ಕೋಡ್, ಬಿ.ಆರ್.ಗುಂಡ, ಮೂಡಲಗುಂಡ, ಹುಲಿಗುಡ್ಡ, ಸಮುದ್ರ, ಪಂದ್ಯಾನ, ಬಂಕಲದೊಡ್ಡಿ ಗ್ರಾಮದ ಹೊಲಗಳಲ್ಲಿ ಡ್ರೋನ್ ಮೂಲಕ ಪರಿಶೀಲಿಸಲಾಯಿತು.

    ಡ್ರೋನ್ ಬಿಡುವ ಸ್ಥಳದಿಂದ ಸುತ್ತಲೂ 500 ಮೀಟರ್‌ನಿಂದ 1ಕಿ.ಮೀ.ವರೆಗೆ ನಿಯಂತ್ರಣ ಮಾಡಬಹುದಾಗಿದ್ದು, ರೈತರ ಜಮೀನಿನ ಬೆಳೆಗಳ ನಡುವೆ ಗಾಂಜಾ ಗಿಡಗಳು ಕಂಡುಬಂದರೆ ಸಿಗ್ನಲ್ ಕೊಡಲಿದೆ. ಅದರ ಜಾಡುಹಿಡಿದು ಗಾಂಜಾ ಬೆಳೆ ಬೆಳೆದಿದ್ದರೆ ಪತ್ತೆ ಹಚ್ಚಬಹುದು. ಪೊಲೀಸರು ಎಲ್ಲ ರೈತರ ಜಮೀನಿಗೆ ಭೇಟಿ ನೀಡುವುದು ಕಷ್ಟಸಾಧ್ಯ. ಗಾಂಜಾ ಬೆಳೆಯುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಪೊಲೀಸ್ ಇಲಾಖೆ ಡ್ರೋನ್ ಮೊರೆಹೋಗಿದೆ.

    ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಾಪುರ, ಬೊಮ್ಮಲಗುಂಡ, ಡಿ.ಗಣೇಕಲ್, ಆಲ್ಕೋಡ ಸೇರಿ ವಿವಿಧೆಡೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಡ್ರೋನ್ ಬಿಡಲಾಗಿದೆ. ಡ್ರೋನ್ ಮೂಲಕ ಗಾಂಜಾ ಬೆಳೆ ಪತ್ತೆ ಹಚ್ಚಬಹುದು. ಹಲವು ಹಳ್ಳಿಗಳಲ್ಲಿ ಡ್ರೋನ್ ಮೂಲಕ ಪರಿಶೀಲಿಸಿದ್ದು, ಎಲ್ಲಿಯೂ ಅಂಥ ಪ್ರಕರಣಗಳು ಕಂಡುಬಂದಿಲ್ಲ ಎಂದು ಜಾಲಹಳ್ಳಿ ಠಾಣೆ ಪಿಎಸ್‌ಐ ಸುಜಾತಾ ನಾಯಕ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts