

ಸಿಂಧನೂರು: ನಗರದ ಬ್ರಾಹ್ಮಣರ ಓಣಿಯ ಶ್ರೀರಾಮ ಮಂದಿರದಲ್ಲಿ ರಾಮನವಮಿ ನಿಮಿತ್ತ ಅದ್ದೂರಿಯಿಂದ ರಥೋತ್ಸವ ನಡೆಯಿತು.
ಇದನ್ನೂ ಓದಿ: ವಿಜೃಂಭಣೆಯ ರಾಮಲಿಂಗೇಶ್ವರ ಬ್ರಹ್ಮರಥೋತ್ಸವ
ದೇವಸ್ಥಾನದ ಅರ್ಚಕ ಸುಬ್ಬುಶಾಸ್ತ್ರೀ ನೇತೃತ್ವದಲ್ಲಿ ಕಳೆದ 9ದಿನಗಳಿಂದ ನಿತ್ಯ ಶ್ರೀರಾಮದೇವರಿಗೆ ಫಲಪಂಚಾಮೃತ ಅಭಿಷೇಕ, ಅಲಂಕಾರ, ಭಜನೆ ನೃತ್ಯ ಜರುಗಿದವು. ಬ್ರಾಹ್ಮಣ ಬೀದಿಯಲ್ಲಿ ಜರುಗಿದ ರಥೋತ್ಸವದಲ್ಲಿ ಚಿಣ್ಣರರು ರಾಮನ ವೇಷ ಧರಿಸಿ ಸಂಭ್ರಮಿಸಿದರು. ಭಕ್ತರು ಶ್ರೀರಾಮನಿಗೆ ಪಾನಕ, ಕೋಸಂಬರಿ ಸಮರ್ಪಿಸಿದರು.
ರಾಮಕೃಷ್ಣಾಚಾರ್ ಗೋನ್ವಾರ, ನರಸಿಂಹಾಚಾರ್ ಮಠಾಧಿಕಾರ್, ಗೋವಿಂದರಾವ್ ಕುಲಕರ್ಣಿ, ಎಂ.ಕೆ.ಗೌರಕರ್, ಪ್ರಹ್ಲಾದ ಗುಡಿ, ಹನುಮೇಶಚಾರ್ ಬಾದರ್ಲಿ, ವಿಶ್ವನಾಥ ಕಲ್ಲೂರು, ಗುಂಡುರಾವ್ ಚನ್ನಳ್ಳಿ, ಮನೋಹರರಾವ್ ಕುಲಕರ್ಣಿ, ರಾಜು ಬಂಡಿ ವಕೀಲ, ವೆಂಕಟೇಶ ಕೆಂಗಲ್, ಪ್ರಹ್ಲಾದ ಕುಲಕರ್ಣಿ, ಪ್ರಭು ದೇಶಪಾಂಡೆ, ಆನಂದ ಗೋರ್ಕರ್, ಪ್ರಭಾಕರ ಕುಲಕರ್ಣಿ, ಕೃಷ್ಣ ಮಲಕ ಸಮುದ್ರ, ಅವಿನಾಶ ಬಂಡಿ ವಕೀಲ, ವಿಜಯ್ ತಲೇಖಾನ್, ವಿನಾಯಕ ಕಲ್ಲೂರು, ಪ್ರಾಣೇಶ ದೇಶಪಾಂಡೆ ಇದ್ದರು.