More

    ವಿಜೃಂಭಣೆಯ ರಾಮಲಿಂಗೇಶ್ವರ ಬ್ರಹ್ಮರಥೋತ್ಸವ


    ಕೊಡಗು : ಕುಶಾಲನಗರ ಸಮೀಪದ ರಾಮಸ್ವಾಮಿ ಕಣಿವೆಯಲ್ಲಿ ಬುಧವಾರ ರಾಮಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತ್ತು.
    ರಾಮನವಮಿ ಅಂಗವಾಗಿ ಪವಿತ್ರ ಗಂಗೆಯಿಂದ ಶ್ರೀ ರಾಮನಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಮತ್ತು ಮಹಾಪೂಜೆಯನ್ನು ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಮತ್ತು ವೇದಬ್ರಹ್ಮ ನರಹರಿ ಶರ್ಮ ನೇತೃತ್ವದ ಪುರೋಹಿತರ ತಂಡ ನೆರವೇರಿಸಿತು.


    ವಸಂತ ಮಾಧವ ಪೂಜೆ, ಕೃಷ್ಣ ಗಂಧೋತ್ಸವ ಮತ್ತು ಶಾಂತೋತ್ಸವ ಪೂಜೆ ನೆರವೇರಿತು. ಹೆಬ್ಬಾಲೆ ಗ್ರಾಮದಿಂದ ಕಾಶಿಯಿಂದ ತಂದ ಗಂಗಾಜಲದಿಂದ ರಾಮನಿಗೆ ಅಭಿಷೇಕ ಮಾಡಿದ ನಂತರ ಶುಭ ಮುಹೂರ್ತದಲ್ಲಿ ರಥೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಚಂಡೆವಾದ್ಯ, ಮಂಗಳವಾದ್ಯ ಜನರ ಆಕರ್ಷಣೆಗೆ ಪಾತ್ರವಾಯಿತು.


    ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯದರ್ಶಿ ಟಿ.ಎನ್.ಶೇಷಾಚಲ, ಗೌರವ ಅಧ್ಯಕ್ಷ ಇ.ಎಸ್.ಗಣೇಶ್, ಸಹ ಕಾರ್ಯದರ್ಶಿ ಕೆ.ಎಲ್.ಮಹೇಶ್ ಕುಮಾರ್, ಕಾರ್ಯಾಧ್ಯಕ್ಷ ಕೆ.ಎಸ್.ಮಾಧವ, ಉಪಾಧ್ಯಕ್ಷ ಕೆ.ಕೆ.ಮಂಜುನಾಥ್ ಸ್ವಾಮಿ, ನಿರ್ದೇಶಕರಾದ ಆರ್.ಆರ್.ಜಯರಾಮ್, ಕೆ.ಆರ್.ಲೋಕೇಶ್, ಆರ್.ಆರ್.ಮಧು, ಶಿರಗಜೆ ನವೀನ್, ಎಚ್.ಡಿ.ಹೇಮರಾಜು, ಎಚ್.ಎಸ್.ಅನಂತರಾಮು, ಗೌರವ ಸಲಹೆಗಾರರಾದ ಆರ್.ವಿ.ನಾರಾಯಣ ಮೂರ್ತಿ, ಕೆ.ಪಿ.ಪರಶಿವ, ಕೆ.ಎಸ್.ಮಹೇಶ್, ಕೆ.ಸಿ.ನಂಜುಂಡ ಸ್ವಾಮಿ ಇತರರು ಪಾಲ್ಗೊಂಡಿದ್ದರು.


    ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ನಡೆಯಿತು. ಸಂಜೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ಶ್ರೀ ಸ್ವಾಮಿಯ ಪಲ್ಲಕ್ಕಿ ಉತ್ಸವ, ಮಹಾಪೂಜೆ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮ ಅಚ್ಚುಕಟ್ಟಾಗಿ ಜರುಗಿತ್ತು. ಬಿಸಿಲ ಬೆಗೆಯಲ್ಲೂ ಸಹಸ್ರಾರು ಸಂಖ್ಯೆಯ ರಾಮ ಭಕ್ತರು ವಿವಿಧ ಊರುಗಳಿಂದ ಆಗಮಿಸಿದ್ದರು. ಕೇಸರಿ ಶಾಲು ತೊಟ್ಟು ಶ್ರೀ ರಾಮನಿಗೆ ಜಯ ಘೋಷ ಮೊಳಗಿಸಿದರು. ಕಣಿವೆಯಲ್ಲಿ ರಥ ಸಾಗುವ ಮಾರ್ಗದಲ್ಲಿ ಗ್ರಾಮದ ಕೆ.ಎಂ.ಶಂಕರನಾರಾಯಣ ಶೆಟ್ಟಿ ಕುಟುಂಬಸ್ಥರು ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ವಿತರಿಸಿ ಜನರ ದಾಹ ತೀರಿಸಿದರು. ಪೊಲೀಸರು ಭದ್ರತೆ ಕಲ್ಪಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts