

ಮೂಡುಬಿದಿರೆ: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಾ.30ರಿಂದ ಏಪ್ರಿಲ್ 8ರವರೆಗೆ ಶ್ರೀ ರಾಮನವಮಿ ಮಹೋತ್ಸವ, ಮನ್ಮಹಾರಥೋತ್ಸವ ನಡೆಯಲಿದೆ. ಮಾ.30ರಂದು ಬೆಳಗ್ಗೆ 7.30ರಿಂದ ಧ್ವಜಾರೋಹಣ ನಡೆಯಲಿದೆ. ಪ್ರತಿದಿನ ಚತುರ್ವೇದ ಪುರಾಣ ಪಾರಾಯಣ, ಸುಂದರಕಾಂಡ ಪಾರಾಯಣ, ವಿಶೇಷ ಪೂಜೆ, ರಾತ್ರಿ ಭಜನೆ, ಪಲ್ಲಕಿ ಉತ್ಸವ, ವಾಹನೋತ್ಸವ ನಡೆಯಲಿದೆ.
ಏ.6ರಂದು ಮಧ್ಯಾಹ್ನ 12.06ಕ್ಕೆ ಶ್ರೀರಾಮ ಜನ್ಮೋತ್ಸವ, ರಾತ್ರಿ ಪುಷ್ಪರಥೋತ್ಸವ, 7ರಂದು ಮನ್ಮಹಾರಥೋತ್ಸವ ನಡೆಯಲಿದೆ. ಪ್ರತಿದಿನ ಸಂಜೆ 6.30ರಿಂದ ಚಂದ್ರಕಾಂತ ಭಟ್ ಅಶ್ವತ್ಥಪುರ ಅವರಿಂದ ಕಥಾಕೀರ್ತನ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಏ.6ರಂದು ಸಂಜೆ 6ರಿಂದ ಸರಿಗಮಪ ಖ್ಯಾತಿಯ ಬೆಂಗಳೂರಿನ ಕೀರ್ತನಾ ಹೊಳ್ಳ ಬಳಗದಿಂದ ಸಂಗೀತ ಸುಧಾ ಹಾಗೂ 7ರಂದು ಸಂಜೆ 6.30ರಿಂದ ಚಿಂತನ ಹೆಗಡೆ ಮಾಳಕೋಡು ನೇತೃತ್ವದ ಯಕ್ಷಪಲ್ಲವಿ ತಂಡದ ಕಲಾವಿದರಿಂದ ಬಡಗುತಿಟ್ಟು ಯಕ್ಷಗಾನ ‘ಪಂಚವಟಿ-ಕುಶ ಲವ’ ಪ್ರದರ್ಶನಗೊಳ್ಳಲಿದೆ. ಮಾ.29ರಂದು ಕೋಠಿ (ಉಗ್ರಾಣ) ಪೂಜೆ, ಏ.3ರಂದು ಶಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ವರ್ಧಂತಿ ಮಹೋತ್ಸವ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.