22 ರಂದು ರಕ್ತಾಕ್ಷ ಚಿತ್ರದ ಟೀಸರ್ ಬಿಡುಗಡೆ

ರೋಹಿತ್ ಮುದಗಲ್
ರೋಹಿತ್ ಮುದಗಲ್
Published on

ಲಿಂಗಸುಗೂರು: ಜು.22 ರಂದು ಸಂಜೆ 5 ಗಂಟೆಗೆ ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಉತ್ತರ ಕರ್ನಾಟಕ ಭಾಗದ ಕಲಾವಿದರು ನಟಿಸಿ, ನಿರ್ಮಿಸಿರುವ ನಟಿಸಿರುವ ರಕ್ತಾಕ್ಷ ಚಲನಚಿತ್ರ ಟೀಸರ್ ಬಿಡುಗಡೆ ಸಮಾರಂಭವು ಜರುಗಲಿದೆ ಎಂದು ನಟ ನಿರ್ಮಾಪಕ ರೋಹಿತ್ ಮುದಗಲ್ ತಿಳಿಸಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ಬಾಸ್ ಸಂಗೀತ ನೀಡಿದ್ದಾರೆ. ಕೆಜಿಎಫ್ ಚಲನಚಿತ್ರದಲ್ಲಿ ನಟಿಸಿರುವ ರೂಪಾ ರಾಯಣ್ಣ, ಅರ್ಚನಾ ಹಾಗೂ ಕಲಾವಿದರಾದ ಪ್ರಭು, ವಿಶ್ವ, ಭದ್ರಿ ನಾರಾಯಣ, ಬಸವರಾಜ ಆದಾಪುರ, ಶಶಿಕುಮಾರ, ಮಹಿಬೂಬ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದಶೆಟ್ಟಿ ಅಭಿನಯಿಸಿದ್ದಾರೆ ಎಂದರು.

ಅಕ್ಟೋಬರ್ ತಿಂಗಳಲ್ಲಿ ಚಲನಚಿತ್ರ ಬಿಡುಗಡೆ

ಚಲನಚಿತ್ರ ಮುಕ್ತಾಯ ಹಂತದಲ್ಲಿದ್ದು, ಅಕ್ಟೋಬರ್ ತಿಂಗಳಲ್ಲಿ ಚಲನಚಿತ್ರ ಬಿಡುಗಡೆಗೆ ಮಹೂರ್ತ ನಿಗದಿಯಾಗಿದೆ. ಟೀಸರ್ ಬಿಡುಗಡೆ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಚಲನಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಜಾನಪದ, ಬಯಲಾಟ, ರಂಗಭೂಮಿ, ಚಲನಚಿತ್ರ ಸೇರಿ ಅನೇಕ ಪ್ರತಿಭಾವಂತ ಕಲಾವಿದರಿದ್ದರೂ ಅವಕಾಶ ದೊರೆಯುತ್ತಿಲ್ಲ. ಹಾಗಾಗಿ ಇಲ್ಲಿನ ಕಲಾವಿದರಿಗೆ ಅವಕಾಶ ಕಲ್ಪಿಸಿ ಒಂದು ಕೋಟಿ ರೂ. ವೆಚ್ಚದಲ್ಲಿ ಹೊಸ ತಂತ್ರಜ್ಞಾನ ಮೂಲಕ ಕೌಟುಂಬಿಕ ಚಲನಚಿತ್ರ ನಿರ್ಮಿಸಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net