ಸವಾಲು ಎದುರಿಸಲು ತರಬೇತಿಯೊಂದಿಗೆ ಬೆಂಬಲ ಅಗತ್ಯ: ಡಾ.ಗುರುರಾಜ್ ಇಟಗಿ ಅಭಿಪ್ರಾಯ

New Project (35)
Published on

ಉಳ್ಳಾಲ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸವಾಲು ಎದುರಿಸುವಲ್ಲಿ ಶಿಕ್ಷಣ ಸಂಸ್ಥೆಯ ತರಬೇತಿಯೊಂದಿಗೆ ಪಾಲಕರ ಬೆಂಬಲವೂ ಅತ್ಯಗತ್ಯ ಎಂದು ಶಾಲೆ ಕೌನ್ಸಿಲರ್ ಡಾ.ಗುರುರಾಜ್ ಇಟಗಿ ಹೇಳಿದರು.

ತಲಪಾಡಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ಹಾಗೂ ಪ್ರಥಮ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.

ಅಹಮದಾಬಾದ್ ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಕ್ಷರಾಗಿ ಪ್ರವೀಣ್ ಆರ್.ವಿ., ಉಪಾಧ್ಯಕ್ಷರಾಗಿ ದಿನೇಶ್ ಕೆ., ಕಾರ್ಯದರ್ಶಿ ಕ್ಷಮಾ ರವೀಂದ್ರ, ಜತೆ ಕಾರ್ಯದರ್ಶಿ ಯತೀಶ್ ರವೀಂದ್ರ ರಾವ್, ಸದಸ್ಯರಾಗಿ ಮಿನಾಲ್ ಶಿನಿ ಶನಿಲ್, ಸಂದೇಶ್ ಶೆಟ್ಟಿ ಯು., ನಿರ್ಮಿತಾ ಎಚ್.ಬಂಡಾರಿ, ದೀಪ್ತಿರಾಣಿ ಎನ್., ಚೈತ್ರಾ, ಜಯಶ್ರೀ ಪ್ರವೀಣ್, ದೀಪಿಕಾ ಕೆ., ರವಿ ರೈ ಆಯ್ಕೆಯಾದರು.

ಸಂಘದ ಮಾಜಿ ಅಧ್ಯಕ್ಷೆ ಡಾ.ಶ್ರೀವಿದ್ಯಾ ಕೆ.ಮಾತನಾಡಿದರು. ಉಪಪ್ರಾಂಶುಪಾಲ ಜಯಶ್ರೀ ಎಲ್.ಮತ್ತು ರಜನಿ ಕೆ.ರೈ ಉಪಸ್ಥಿತರಿದ್ದರು. ಪ್ರಾಂಶುಪಾಲ ಮೋಹನ್‌ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಜನಿ ಕೆ.ರೈ ಸ್ವಾಗತಿಸಿದರು. ಶಿಕ್ಷಕಿಯರಾದ ದೀಪಾ ವಂದಿಸಿದರು. ರಶ್ಮಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net