

ಬೆಳ್ತಂಗಡಿ: ಪ್ರಕೃತಿ ಆಸ್ವಾದನೆಯು ನಮ್ಮ ಮನಸ್ಸಿಗೆ ಮುದ ನೀಡಲಿದ್ದು, ಪೂರ್ವಜರು ಕಾಪಾಡಿಕೊಂಡು ಬಂದ ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯೋಧರು ದೇಶ ಕಾಯುವ ಜತೆಗೆ ಪ್ರಕೃತಿ ಆರಾಧಕರಾಗಿದ್ದು, ವಿದ್ಯಾರ್ಥಿಗಳು ಯೋಧರ ಆದರ್ಶಗಳನ್ನು ಮೈಗೂಡಿಸಿ ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ಮೂಡುಬಿದರೆ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟರಕ ಸ್ವಾಮೀಜಿ ನುಡಿದರು.
ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳ ವತಿಯಿಂದ ಕಾಲೇಜಿನ ಅರಮಲೆಬೆಟ್ಟ ಕ್ಯಾಂಪಸ್‌ನಲ್ಲಿ ಶನಿವಾರ ನಡೆದ ರಕ್ಷಕ ನಮನ 2025 ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ವಿಶ್ರಾಂತ ಶಿಕ್ಷಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.
ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ಭೂ ಸೇನೆಯ ನಿವೃತ್ತ ಮೇಜರ್ ಜನರಲ್ ಎಂ.ವಿ.ಭಟ್ ಸಾಧಕರನ್ನು ಅಬಿನಂದಿಸಿದರು. ಪತ್ರಕರ್ತ ರವಿಶಂಕರ್ ಭಟ್ ಕಾಲೇಜಿನ ಕರಪತ್ರ ಅನಾವರಣಗೊಳಿಸಿದರು.
ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್, ಮಂಗಳೂರು ಅಗ್ನಿಶಾಮಕ ಠಾಣೆಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಿ.ಎಂ.ತಿರುಮಲೇಶ್, ವಿದ್ಯಾಸಾಗರ ಕ್ಯಾಂಪಸ್‌ನ ಪ್ರಾಂಶುಪಾಲ ಡಾ.ನವೀನ್ ಮರಿಕೆ, ಅರಮಲೆಬೆಟ್ಟ ಕ್ಯಾಂಪಸ್‌ನ ಪ್ರಾಂಶುಪಾಲ ಡಾ.ಪ್ರಜ್ವಲ್ ಕಜೆ ಮೊದಲಾದವರಿದ್ದರು.
ಉಪನ್ಯಾಸಕ ಪ್ರಸನ್ನ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಎಕ್ಸೆಲ್ ಹೆಜ್ಜೆನಾದ ಕಾರ್ಯಕ್ರಮ ನಡೆಯಿತು.
ಧರ್ಮ ಶಿಕ್ಷಣ ನೀಡುವ ಏಕೈಕ ದೇಶ ಭಾರತವಾಗಿದ್ದು, ಇದರಿಂದಾಗಿ ಜಗತ್ತಿಗೆ ಜೀವನ ಮೌಲ್ಯ ಕಲಿಸುವ ಶಕ್ತಿ ಭಾರತಕ್ಕಿದೆ. ಭಾರತೀಯ ಭಾಷೆಗೆ ಅದ್ಭುತ ಶಕ್ತಿ ಇದ್ದು, ಇದು ಇನ್ನಷ್ಟು ಬೆಳೆಯಲು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಅಗತ್ಯವಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರೇಮ ಕಲಿಸಬೇಕು. ಮಕ್ಕಳು ಉತ್ತಮ ವ್ಯಕ್ತಿಗಳಾಗಬೇಕಾದರೆ ಅಂಕವೊಂದೇ ಮಾನದಂಡವಲ್ಲ. ಅವರು ಮಾನಸಿಕವಾಗಿ ಗಟ್ಟಿಯಾಗಲು ಪೋಷಕರು ಆತ್ಮಸ್ಥೈರ್ಯ ತುಂಬಬೇಕು. ಕಜಂಪಾಡಿ ಸುಬ್ರಹ್ಮಣ್ಯ ಭಟ್ ವಿಶ್ರಾಂತ ಶಿಕ್ಷಕ