

ಹೆಬ್ರಿ: ರಕ್ಷೆಯಲ್ಲಿರುವ ಮೂರು ರೇಷ್ಮೆಯ ಎಳೆಗಳು ಆತ್ಮರಕ್ಷಣೆ, ಧರ್ಮರಕ್ಷಣೆ, ರಾಷ್ಟ್ರರಕ್ಷಣೆಯ ಕರ್ತವ್ಯ ತಿಳಿಸುತ್ತದೆ ಎಂದು ಕುಟುಂಬ ಪ್ರಬೋಧನಾ ಜಿಲ್ಲಾ ಸಹ ಸಂಯೋಜಕಿ ಸುವರ್ಣ ಭಗಿನಿ ಹೇಳಿದರು.
ಪಿಆರ್‌ಎನ್ ಅಮೃತಭಾರತಿಯ ಅನ್ನಪೂರ್ಣ ಸಭಾಂಗಣದಲ್ಲಿ ಮಾತೃಭಾರತಿ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರುರಾಜ್ ರಾವ್ ಕೋಟೇಶ್ವರ, ಸಂಸ್ಥೆಯ ಟ್ರಸ್ಟ್ ಸದಸ್ಯ ಲಕ್ಷ್ಮಣ್ ಭಟ್, ವಸತಿನಿಲಯ ಸದಸ್ಯ ರಾಮಕೃಷ್ಣ ಆಚಾರ್ಯ, ಶಿಕ್ಷಕಿ ಮೀನಾಕ್ಷಿ, ವಿಮಲಾ ಉಪಸ್ಥಿತರಿದ್ದರು. ಶ್ರುತಿ ಸ್ವಾಗತಿಸಿದರು. ಉಷಾ ಹೆಬ್ಬಾರ್ ನಿರೂಪಿಸಿದರು. ಸುಮಂಗಲಾ ಭಾರಧ್ವಜ್ ಸಂದೇಶ ಪತ್ರ ವಾಚಿಸಿದರು. ರೇವತಿ ನಾಯಕ್ ವಂದಿಸಿದರು.