ಮರಗಳ ಹಾನಿ ಪ್ರಕೃತಿಗೆ ಮಾರಕ

shirva
ಉಸಿರಿಗಾಗಿ ಹಸಿರು ಕಾರ್ಯಕ್ರಮದಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಗಿಡ ವಿತರಿಸಿದರು
Published on

ವಿಜಯವಾಣಿ ಸುದ್ದಿಜಾಲ ಶಿರ್ವ

ಅರಣ್ಯ ನಾಶದಿಂದಾಗಿ ಪ್ರಕೃತಿ ವಿಕೋಪ ಹೆಚ್ಚಾಗುತ್ತಿದ್ದು, ಗಿಡಗಳನ್ನು ಬೆಳೆಸದಿದ್ದರೆ ಹೆಚ್ಚಿನ ಅನಾಹುತ ನಡೆಯಬಹುದು. ಪ್ರಕೃತಿಯನ್ನು ಉಳಿಸಿ ಬೆಳೆಸುವುದರಿಂದ ಮುಂದಿನ ಜನಾಂಗಕ್ಕೆ ಸುಂದರ ಪರಿಸರ ನೀಡಬಹುದು ಎಂದು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.
ಶಿರ್ವ ಹಿಂದು ಪದವಿ ಪೂರ್ವ ಕಾಲೇಜು, ಹಿಂದು ಪ್ರೌಢಶಾಲೆ ಮತ್ತು ಕಾಪುವಿನ ಉಸಿರಿಗಾಗಿ ಹಸಿರು ಸಂಘಟನೆಯ ಜಂಟಿ ಆಶ್ರಯದೊಂದಿಗೆ ವಿದ್ಯಾವರ್ಧಕ ಕ್ಯಾಂಪಸ್‌ನಲ್ಲಿ ನಡೆದ ಉಸಿರಿಗಾಗಿ ಹಸಿರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಘಟನೆಯ ಪ್ರತಿನಿಧಿ ಸಂತೋಷ್ ಎಂ.ಶೆಟ್ಟಿಗಾರ್ ಗಿಡಗಳನ್ನು ಪೋಷಿಸುವ ಬಗ್ಗೆ ಮಾಹಿತಿ ನೀಡಿದರು. ಆಡಳಿತಾಧಿಕಾರಿ ಪ್ರೊ. ವೈ.ಭಾಸ್ಕರ ಶೆಟ್ಟಿ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿ ಸುಂದರ ಮೇರಾ, ಇಕೋ ಕ್ಲಬ್ ನೋಡಲ್ ಶಿಕ್ಷಕಿ ವೀಣಾ, ಎನ್‌ಸಿಸಿ ಸಹಾಯಕ ಅಧಿಕಾರಿ ಗಣೇಶ್ ಶೆಟ್ಟಿ, ದೈಹಿಕ ಶಿಕ್ಷಣ ಉಪನ್ಯಾಸಕ ದೇವೇಂದ್ರ ಹೆಗ್ಡೆ, ದೈಹಿಕ ಶಿಕ್ಷಣ ಶಿಕ್ಷಕ ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಭಾಸ್ಕರ ಎ. ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ವಸಂತಿ ವಂದಿಸಿದರು. ಶಿಕ್ಷಕಿ ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net