ಮನಸ್ಸಿಗೆ ಮುದ ನೀಡುವ ಕಲೆ ವೇಣುವಾದನ

saligrama
ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದಲ್ಲಿ ದ್ವಿತೀಯ ಶ್ರಾವಣ ದಿನದ ಅಂಗವಾಗಿ ದೇವಳದ ಸ್ವಾಗತ ಅಂಕಣದಲ್ಲಿ ಬೆಂಗಳೂರಿನ ವೇಣುವಾದಕ ಶ್ರೀ ವೈದಿಕ ರಾವ್, ಹಿಮ್ಮೇಳದಲ್ಲಿ ಸಹಕರಿಸಿದ ಸುಧೀರ್ ಆಪ್ಟೆ, ಸೀತಾರಾಮ ಗೋಪೀನಾಥ ಅವರನ್ನು ಅಭಿನಂದಿಸಲಾಯಿತು
Published on

ಕೋಟ: ಸಂಗೀತದ ಯಾವುದೇ ಪ್ರಕಾರ ಮನಸ್ಸಿಗೆ ಆಹ್ಲಾದಕರವಾಗಿದ್ದು, ವೇಣು, ಕೊಳಲು ವಾದನ ಕೂಡ ಅದರ ಸಾಲಿಗೆ ಸೇರುವ ಪ್ರಕಾರವೆಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಅಭಿಪ್ರಾಯಪಟ್ಟರು.

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದಲ್ಲಿ ದ್ವಿತೀಯ ಶ್ರಾವಣ ದಿನದ ಅಂಗವಾಗಿ ದೇವಳದ ಸ್ವಾಗತ ಅಂಕಣದಲ್ಲಿ ಬೆಂಗಳೂರಿನ ವೇಣುವಾದಕ ಶ್ರೀ ವೈದಿಕ ರಾವ್ ಮಾತನಾಡಿದರು.

ಬೆಂಗಳೂರಿನ ವೇಣುವಾದಕ ಶ್ರೀ ವೈದಿಕ ರಾವ್, ಹಿಮ್ಮೇಳದಲ್ಲಿ ಸಹಕರಿಸಿದ ಸುಧೀರ್ ಆಪ್ಟೆ, ಸೀತಾರಾಮ ಗೋಪೀನಾಥ ಅವರನ್ನು ಅಭಿನಂದಿಸಲಾಯಿತು. ದೇಗುಲದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ , ಕೂಟ ಮಹಾಜಗತ್ತಿನ ಪೂರ್ವಾಧ್ಯಕ್ಷ ತಾರಾನಾಥ ಹೊಳ್ಳ, ಸಹಾಯಕ ಪ್ರಬಂಧಕ ಪಾಂಡೇಶ್ವರ ಗಣೇಶ ಭಟ್ಟ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net