

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ರಕ್ಷಾಬಂಧನ ಕಾರ್ಯಕ್ರಮ ಮೆಸ್ಕಾಂ ಸಿಬ್ಬಂದಿಯವರೊಂದಿಗೆ ಆಚರಿಸಲಾಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ವ್ಯವಸ್ಥಾ ಪ್ರಮುಖ್ ಸುಧೀರ್ ನಾಯಕ್ ಮಾತನಾಡಿ, ರಕ್ಷಾಬಂಧನ ಅಣ್ಣ ತಂಗಿಯರ ಮಧುರ ಬಾಂಧವ್ಯದ ಸಂಕೇತ. ತಂಗಿ ತನ್ನ ಅಣ್ಣನಿಗೆ ರಾಖಿ ಕಟ್ಟಿ ರಕ್ಷಣೆಯನ್ನು ಕೋರುತ್ತಾಳೆ. ಅಣ್ಣ ಅವಳ ರಕ್ಷಣೆಯ ಭರವಸೆ ನೀಡುತ್ತಾನೆ. ನಾವೆಲ್ಲರೂ ದೇಶದ ರಕ್ಷಣೆಯನ್ನು ಮಾಡುವ ಸಂಕಲ್ಪವನ್ನು ತೊಡಬೇಕು ಎಂದರು.
ಮೆಸ್ಕಾಂ ಸಿಬ್ಬಂದಿ ಅಪ್ಪಣ್ಣ, ಪ್ರಾಂಶುಪಾಲ ಪ್ರಕಾಶ್ ಜೋಗಿ, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸ್ವಸ್ತಿ ಕಿಣಿ ನಿರೂಪಿಸಿದರು. ಸಿದ್ದಮ್ಮ ವಂದಿಸಿದರು.