ಸಾಧಕ ವಿದ್ಯಾರ್ಥಿಗಳಿಗೆ ಯುಎಫ್​ಸಿಯಿಂದ ಸನ್ಮಾನ...

Sanmaana
Published on

ವಿಜಯವಾಣಿ ಸುದ್ದಿಜಾಲ ಉಡುಪಿ

ಉದ್ಯಾವರದ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯಾದ ಉದ್ಯಾವರ ಫ್ರೆಂಡ್ಸ್​ ಸರ್ಕಲ್​ (ಯುಎಫ್​ಸಿ) ವತಿಯಿಂದ ಆಗಸ್ಟ್​ 15ರಂದು ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ರಾಜ್ಯಕ್ಕೆ 5ನೇ ರ್ಯಾಂಕ್​ ಗಳಿಸಿದ ಜಯದೀಪ ಪೂಜಾರಿ, (621 ಅಂಕ), 6ನೇ ರ್ಯಾಂಕ್​ ಗಳಿಸಿದ ರಿಹಾ ಮೆಲನಿ ಡಿಸೋಜಾ (620 ಅಂಕ ) ಮತ್ತು ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 9ನೇ ರ್ಯಾಂಕ್​ ಗಳಿಸಿದ ದೃಶಿತಾ ಎಚ್​. ಪುತ್ರನ್​ (591 ಅಂಕ), 8ನೇ ರ್ಯಾಂಕ್​ ಗಳಿಸಿದ ಮಹಮ್ಮದ್​ ರಿಝಾನ್​ (593 ಅಂಕ) ಅನುಪಸ್ಥಿತಿಯಲ್ಲಿ ಅವರ ತಂದೆ ಮಹಮ್ಮದ್​ ಆಸೀಫ್​ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ನಿರ್ದೇಶಕ ಅಬ್ದುಲ್​ ಜಲೀಲ್​ ಸಾಹೇಬ್​, ಸೈಂಟ್​ ಪ್ರಾನ್ಸಿಸ್​ ಕ್ಸೇವಿಯರ್​ ಚರ್ಚ್​ನ ಧರ್ಮಗುರು ರೆ.ಫಾ.ಅನಿಲ್​ ಡಿಸೋಜಾ ಮತ್ತು ಉಡುಪಿ ಜಿಲ್ಲಾ ಅಥ್ಲೆಟಿಕ್ಸ್​ ಅಸೋಸಿಯೇಷನ್​ನ ಅಧ್ಯಕ್ಷ ಹರಿಪ್ರಸಾದ್​ ರೈ ಅವರು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು.

ಗೌರವಾಧ್ಯಕ್ಷ ಉದ್ಯಾವರ ನಾಗೇಶಕುಮಾರ್​, ಅಧ್ಯಕ್ಷ ಗಿರೀಶ ಗುಡ್ಡೆಯಂಗಡಿ, ಪ್ರಧಾನ ಕಾರ್ಯದರ್ಶಿ ಸುಹೇಲ್​ ರಹಮತ್ತುಲ್ಲ, ಕೋಶಾಧಿಕಾರಿ ಸತೀಶ ಡಿ. ಸಾಲಿಯಾನ್​, ನಿರ್ದೇಶಕರಾದ ಚಂದ್ರಾವತಿ ಎಸ್​. ಭಂಡಾರಿ, ಶರತಕುಮಾರ್​, ಯು.ಪದ್ಮನಾಭ ಕಾಮತ, ಮಾಜಿ ಉಪಾಧ್ಯಕ್ಷೆ ಸುಗಂಧಿ ಶೇಖರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net