ರಕ್ಷಾ ಬಂಧನ ಆಚರಣೆ

10M.D.R.4
Published on

ಮದ್ದೂರು: ಪಟ್ಟಣದ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲ ಆವರಣದಲ್ಲಿ ಆರ್‌ಎಸ್‌ಎಸ್ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಮುಖಂಡ ಗುರುಸ್ವಾಮಿ ಮಾತನಾಡಿ, ರಕ್ಷಾ ಬಂಧನ ಹಬ್ಬ ಕೂಡ ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಹಬ್ಬ. ಇದು ಸಂಭ್ರಮ, ಸಡಗರ, ಸಂತೋಷವನ್ನು ಹೆಚ್ಚಿಸುವ ದಿನವಾಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಜನರು ಸಂಭ್ರಮದಿಂದ ಆಚರಿಸುತ್ತಾರೆ ಎಂದರು.

ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಪೂರ್ಣಿಮೆ ದಿನದಂದು ಆಚರಿಸುವುದರಿಂದ ಇದನ್ನು ನೂಲು ಹುಣ್ಣಿಮೆ ಎಂದು ಕೂಡ ಆಚರಿಸಲಾಗುತ್ತದೆ. ಈ ಹಬ್ಬವು ಸಹೋದರ ಮತ್ತು ಸಹೋದರಿಯರೊಂದಿಗೆ ಸಂಬಂಧವನ್ನು ಹೊಂದಿರುವುದರಿಂದ ಇದನ್ನು ಬಾಂಧವ್ಯ ಬೆಸೆಯುವ ಹಬ್ಬವೆಂದೇ ಕರೆಯಲಾಗುತ್ತದೆ ಎಂದರು.

ಮುಖಂಡರಾದ ಎಂ.ಸಿ.ಸಿದ್ದು, ನೈದಿಲೆ ಚಂದ್ರು, ಹೋಟೆಲ್ ಗೋಪಾಲ್, ಕೆ.ಟಿ.ನವೀನ್‌ಕುಮಾರ್, ಸಿದ್ದಪ್ಪಾಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net