ಕಕ್ಕೇರಾ: ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್, ಕರವೇ ವೃತ್ತ, ಪುರಸಭೆ, ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಮತ್ತು ಅಪ್ಪು ವೃತ್ತದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ಸಣ್ಣ ಅಯ್ಯಾಳಪ್ಪ ಬಡಿಗೇರ ರಾಷ್ಟç ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ದೇವಿಂದ್ರಪ್ಪ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ ಮಾನಪ್ಪ ಗೋನಾಲ್, ಸದಸ್ಯರು ಹಾಗೂ ಸಿಬ್ಬಂದಿ ಇದ್ದರು. ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ದೇವಿಂದ್ರಪ್ಪ ದೇಸಾಯಿ ಹಾಗೂ ಶಾಲಾ ಮುಖ್ಯಶಿಕ್ಷಕ ಬಸಯ್ಯಸ್ವಾಮಿ ರಾಷ್ಟç ಧ್ವಜರೋಹಣ ಮಾಡಿದರು. ಶಿಕ್ಷಕರಾದ ದೇವಿಂದ್ರಪ್ಪ ಆಲದಾರ್ತಿ, ದೇವಿಂದ್ರಪ್ಪ ಸಜ್ಜನ್, ಗಣೇಶ ಬಸಾಪೂರ, ಅತಿಥಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣಗೌಡ, ಗುಂಡಪ್ಪ ಸೊಲಾಪುರ ಜಂಟಿಯಾಗಿ ರಾಷ್ಟçಧ್ವಜಾರೋಹಣ ಮಾಡಿದರು. ಮುಖ್ಯಶಿಕ್ಷಕ ರಂಜಾನ ಲೋಣಿ, ರಿಜುವಾನಾ ಬೇಗಂ, ಅತಿಥಿ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಇದ್ದರು.