ನನ್ನ ಜೀವಕ್ಕೆ ಅಪಾಯವಾದರೆ ಶೇಖ್​ ಮೋದಿಯೇ ಕಾರಣ: ರಾಜು ತಾಳಿಕೋಟೆ ಆರೋಪ; ಹಾಸ್ಯನಟನ ಮೇಲಿನ ಹಲ್ಲೆ ಪ್ರಕರಣವೀಗ ಗಂಭೀರ!

ಕೌಟುಂಬಿಕ ಕಲಹ: ವಿವಾದದಲ್ಲಿ ಬಿಗ್‌ಬಾಸ್ ಸ್ಪರ್ಧಿ ರಾಜು ತಾಳಿಕೋಟಿ Raju Talikoti Family dispute - youtube
Published on

ವಿಜಯಪುರ: ಹಾಸ್ಯನಟ ರಾಜು ತಾಳಿಕೋಟೆ ಮೇಲಿನ ಹಲ್ಲೆ ಪ್ರಕರಣವೀಗ ಗಂಭೀರವಾಗಿದ್ದು, ತಮ್ಮ ಜೀವಕ್ಕೂ ಅಪಾಯವಿದೆ ಎಂಬುದಾಗಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಅವರು ತಮಗೆ ಕೊಲೆ ಬೆದರಿಕೆ ಇರುವುದಾಗಿಯೂ ಹೇಳಿಕೊಂಡಿದ್ದಾರೆ.

ತಮ್ಮ ಅಕ್ಕನ ಮಗ ಫಯಾಜ್ ಕರಜಗಿ ಹಾಗೂ ಆತನ ಪತ್ನಿ ಸನಾ ಕರಜಗಿಗೂ ವೈಮನಸ್ಸಿತ್ತು. ಅದರ ಬಗ್ಗೆ ಮಾತನಾಡಿ ಅವರ ಸಂಸಾರ ಸರಿಪಡಿಸಲು ನಾನು ಯೋಗಾಪುರಕ್ಕೆ ತೆರಳಿದ್ದೆ. ಈ ವೇಳೆ ನನ್ನ ಮೇಲೆಯೇ ಹಲ್ಲೆ ಮಾಡಲಾಗಿದೆ ಎಂದು ರಾಜು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ ಫಯಾಜ್ ಹೆಂಡತಿಯ ಅಕ್ಕನ ಗಂಡ ಶೇಖ್ ಮೋದಿ ಎಂಬಾತ ಹಣೆಗೆ ಪಿಸ್ತೂಲ್ ಇಟ್ಟು ಬೆದರಿಸಿದ್ದಾನೆ ಎಂದು ಆರೋಪಿಸಿರುವ ರಾಜು ತಾಳಿಕೋಟೆ, ನನ್ನ ಜೀವಕ್ಕೆ ಅಪಾಯವಾದರೆ ಶೇಖ್ ಮೋದಿಯೇ ಕಾರಣ ಎಂದೂ ಹೇಳಿದ್ದಾರೆ. ಈ ಸಂಬಂಧ ಅಕ್ಕನ ಮಗನ ಪತ್ನಿ ಸನಾ, ಆಕೆಯ ತಾಯಿ ಫಾತಿಮಾ, ಆಕೆಯ ಅಕ್ಕ ಹಾಗೂ ಆಕೆಯ ಅಕ್ಕನ ಗಂಡ ಶೇಖ್ ಮೋದಿ ಮತ್ತು ಇತರರ ವಿರುದ್ಧ ರಾಜು ತಾಳಿಕೋಟೆ ಗೋಳಗುಮ್ಮಟ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net