ರಾಜೂ ತಾಳಿಕೋಟಿ ವಿರುದ್ಧ ಕೇಸ್​: ಸೋದರಳಿಯನ ಪತ್ನಿಗೆ ಹಲ್ಲೆ ಮಾಡಿ ಬಲವಂತವಾಗಿ ವಿಷ ಕುಡಿಸಿದ್ರಾ?

raju talikote
Published on

ವಿಜಯಪುರ: ಅಕ್ಕನ ಮಗನ ಪತ್ನಿಗೆ ಹಲ್ಲೆ ಮಾಡಿ ಬಲವಂತವಾಗಿ ವಿಷ ಕುಡಿಸಿದ ಆರೋಪದಲ್ಲಿ ಹಾಸ್ಯನಟ ರಾಜೂ ತಾಳಿಕೋಟಿ ವಿರುದ್ಧ ಕೇಸ್​ ದಾಖಲಾಗಿದೆ.

ರಾಜೂ ತಾಳಿಕೋಟಿ ಅವರ ಸೋದರಳಿ ಫಯಾಜ್ ಕರಜಗಿ ಮತ್ತು ಈತನ ಪತ್ನಿ ಸನಾ ಕರಜಗಿ ನಡುವೆ ಕೌಟುಂಬಿಕ ಕಲಹ ಇತ್ತು. ಇದೇ ವಿಚಾರವಾಗಿ ಯೋಗಾಪುರದಲ್ಲಿ ಸನಾಳ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ವಿಷ ಕುಡಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದೆ. ಸನಾಳನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯು ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

ನನ್ನ ಮಗಳಿಗೆ ಹಲ್ಲೆ ಮಾಡಿ ಬಲವಂತವಾಗಿ ವಿಷ ಕುಡಿಸಿ ಕೊಲ್ಲಲು ಯತ್ನಿಸಿದ್ದಾರೆ ಎಂದು ರಾಜೂ ತಾಳಿಕೋಟಿ, ಇವರ ಪತ್ನಿ ಪ್ರೇಮಾ ತಾಳಿಕೋಟಿ, ಸನಾಳ ಪತಿ ಫಯಾಜ್ ಕರಜಗಿ, ಸನಾಳ ಭಾವ ಪಿಂಟು ಕರಜಗಿ ಸೇರಿದಂತೆ ಇತರರ ವಿರುದ್ಧ ಸನಾಳ ತಾಯಿ ಫಾತಿಮಾ ಶಿರಹಟ್ಟಿ ಅವರು ವಿಜಯಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net