ಮುಖ್ಯಪೇದೆ ರಜನಿಕಾಂತ್‌ಗೆ ಶ್ರೀಗುರುಸೇವಾ ರತ್ನ ಪ್ರಶಸ್ತಿ

Rajanikant barude
Published on

ಕಲಬುರಗಿ: ಹಾರಕೂಡದ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದಿಂದ ಶ್ರೀಗುರು ಸೇವಾ ರತ್ನ ಪ್ರಶಸ್ತಿಗೆ ನಗರ ಪೊಲೀಸ್ ಮುಖ್ಯ ಪೇದೆಯಾಗಿರುವ ಸಾಹಿತಿ, ಬಹುಮುಖ ಪ್ರತಿಭೆ ರಜನಿಕಾಂತ ಬರೂಡೆ ಆಯ್ಕೆಯಾಗಿದ್ದಾರೆ. ಪೊಲೀಸ್ ಪೇದೆ ರಜನಿಕಾಂತ ಹನಿಗವನ, ಗ್ರಾಮ ಪರಿಚಯ, ಹಾರಕೂಡ ಚನ್ನಬಸವೇಶ್ವರರ ಭಕ್ತಿ ಗೀತೆ, ಮಾತಾ ಜಕ್ಕಮೇಶ್ವರಿ ಭಕ್ತಿ ಗೀತೆಗಳನ್ನು ರಚಿಸಿದ್ದಾರೆ. `ನಮ್ಮ ತಂಬಕವಾಡಿ' ಕಿರುಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಇವರ ಪೊಲೀಸ್, ಸಾಹಿತ್ಯ, ಕಿರುಚಿತ್ರ, ಭಕ್ತಿ ಸಾಹಿತ್ಯ ಸೇವೆ ಪರಿಗಣಿಸಿದ ಶ್ರೀಗುರು ಚನ್ನಬಸವೇಶ್ವರ ಸಂಸ್ಥಾನದ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಶ್ರೀಗುರು ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಅ.೨೪ರಂದು ಹಾರಕೂಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net