

ಕೋಟ: ಕೋಟ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಕಟ್ಟಡದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ.ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಮಳೆಗಾಲ ದಿನ ಹಾಡು ಕತೆಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಗಾಯಕಿ ಭಾಗ್ಯೇಶ್ವರಿ ಮಯ್ಯ ಮತ್ತು ವಿಧಾತ್ರಿ ಮಯ್ಯ ಅವರಿಂದ ಮಳೆ ಕುರಿತ ಹಾಡುಗಳ ಗಾಯನ, ದ.ರಾ.ಬೇಂದ್ರೆ, ಎಚ್.ಎಸ್.ವೆಂಕಟೇಶ ಮೂರ್ತಿ, ಕುವೆಂಪು, ಅವರ ಗೀತೆ ಪ್ರಸ್ತುತ ಪಡಿಸಿದರು.
ಶ್ರೀನಿವಾಸ ಅಡಿಗ ತೆಕ್ಕಟ್ಟೆ, ನರೇಂದ್ರ ಕುಮಾರ್ ಕೋಟ, ಕುಚ್ಚೂರು ಲಕ್ಷೀ ಜಿ.ಭಟ್, ಸುಮನಾ ಹೇರ್ಳೆ, ನೀಲಾವರ ಸುರೇಂದ್ರ ಅಡಿಗ, ಉಪೇಂದ್ರ ಸೋಮಯಾಜಿ, ವಾಣಿಶ್ರೀ ಅಡಿಗ, ಸವಿತಾ ಶಾಸ್ತ್ರಿ ಮಳೆ ಕುರಿತು ತಾವು ಬರೆದ ಕಥೆ, ಕವನ, ಹಾಡು ಹಾಗೂ ಅನುಭವ ಹಂಚಿಕೊಂಡರು. ಡಾ.ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವಿದ್ಯಾರ್ಥಿ ಪ್ರತಿನಿಧಿಗಳಾದ ಅವನೀಶ ಐತಾಳ ಪಿ., ಅಂಶು ಡಿ., ಭೂಮಿಕಾ, ಶರ್ಮಿಳಾ, ಮಾನಸಾ, ಶ್ರೇಯಾ, ಭೂಮಿ, ಶ್ರೀಶಾಂತ ತಮ್ಮ ಸ್ವರಚಿತ ಕವನ ವಾಚಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯ ದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸಮನ್ವಯದ ಕುರಿತು ಮಾತನಾಡಿದರು.
ಇದೇ ವೇಳೆ ಪಾರಂಪಳ್ಳಿಯಲ್ಲಿ ಪಾರಂಪಳ್ಳಿ ನರಸಿಂಹ ಐತಾಳರ ಸರ್ವಾಧ್ಯಕ್ಷತೆಯಲ್ಲಿ ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ತಾಲೂಕು ಕಸಾಪ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳರನ್ನು ಗೌರವಿಸಲಾಯಿತು.
ಡಾ.ಉಮೇಶ್ ಭಟ್, ನರಸಿಂಹ ಮೂರ್ತಿ ರಾವ್, ಜನಾರ್ದನ ಕೊಡವೂರು, ಪೂರ್ಣಿಮಾ ಜನಾರ್ದನ, ಮನೋಹರ ಪಿ., ಕಮಲಾ ಮಯ್ಯ, ಶ್ರೀದೇವಿ ಹಂದೆ, ವಿಜಯಲಕ್ಷ್ಮ್ಮಿ, ಸತೀಸ್ ವಡ್ಡರ್ಸೆ ಉಪಸ್ಥಿತರಿದ್ದರು. ವಿಧಾತ್ರಿ, ಭಾಗ್ಯೇಶ್ವರಿ ಮಯ್ಯ ಪ್ರಾರ್ಥಿಸಿದರು. ಉಪೇಂದ್ರ ಸೋಮಯಾಜಿ ಪ್ರಸ್ತಾವನೆಗೈದು ಸ್ವಾಗತಿಸಿ, ಮಹಾಲಕ್ಷ್ಮಿ ಸೋಮಯಾಜಿ ವಂದಿಸಿ. ಮಾನಸಾ ನಿರೂಪಿಸಿದರು.