ಆಸ್ಪತ್ರೆ ಆವರಣ, ವಸತಿಗೃಹಕ್ಕೆ ನುಗ್ಗಿದ ಮಳೆ ನೀರು

PHOTO-2025-05-15-18-10-49
ಎಚ್.ಡಿ.ಕೋಟೆ ಪಟ್ಟಣದಲ್ಲಿ ಗುರುವಾರ ಸುರಿದ ಭಾರಿ ಮಳೆಯಿಂದ ತಾಯಿ ಮಕ್ಕಳ ಆಸ್ಪತ್ರೆ, ಆಯುರ್ವೇಧ ಆಸ್ಪತ್ರೆ, ಆಸ್ಪತ್ರೆ ಸಿಬ್ಬಂದಿ ವಸತಿಗೃಹಗಳ ಸುತ್ತ-ಮತ್ತ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿ ರೋಗಿಗಳು ಪರದಾಡುವಂತಾಗಿತ್ತು.
Published on

ಎಚ್.ಡಿ.ಕೋಟೆ: ಪಟ್ಟಣದಲ್ಲಿ ಗುರುವಾರ ಸುರಿದ ಭಾರಿ ಮಳೆಯಿಂದ ತಾಯಿ ಮಕ್ಕಳ ಆಸ್ಪತ್ರೆ, ಆಯುರ್ವೇಧ ಆಸ್ಪತ್ರೆ, ಆಸ್ಪತ್ರೆ ಸಿಬ್ಬಂದಿ ವಸತಿಗೃಹಗಳ ಸುತ್ತ-ಮತ್ತ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿ ರೋಗಿಗಳು ಪರದಾಡುವಂತಾಗಿತ್ತು.

ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮುಂಬಾಗ ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ಭಾರಿ ಮಳೆಯಿಂದ ತಾಯಿ ಮಕ್ಕಳ ಆಸ್ಪತ್ರೆ ಆವರಣದಲ್ಲಿ ಸಂಪೂರ್ಣ ಮಳೆ ನೀರು ಜಲಾವೃತಗೊಂಡಿತು. ಆಸ್ಪತ್ರೆಗೆ ಆಗಮಿಸಿದ ರೋಗಿಗಳು ಆಸ್ಪತ್ರೆಗೆ ತೆರಳುವುದಕ್ಕೆ ಪರದಾಡುವ ಪರಿಸ್ಥಿತಿ ಉಂಟಾಗಿತ್ತು.

ಆಸ್ಪತ್ರೆಯ ಸುತ್ತಮುತ್ತ ಇರುವ ಬಡಾವಣೆ ಬೀದಿಗಳಲ್ಲಿ ಚರಂಡಿ ವ್ಯವಸ್ಥೆ, ಡಕ್ ವ್ಯವಸ್ಥೆಗಳಿಲ್ಲದ ಕಾರಣ ರಸ್ತೆ ಬದಿಯಿಂದ ಬರುವ ಮಳೆ ನೀರು ಆಸ್ಪತ್ರೆ ಮುಂಭಾಗಕ್ಕೆ ಹರಿದು ರೋಗಿಗಳ ಓಡಾಟಕ್ಕೆ ಅನಾನುಕೂಲ ಸೃಷ್ಟಿಯಾಗಿದೆ. ಸತತವಾಗಿ ಒಂದು ಗಂಟೆ ಸುರಿದ ಮಳೆ ನೀರು, ಆಸ್ಪತ್ರೆ ಆವರಣಕ್ಕೆ ನುಗ್ಗಿದೆ. ಇನ್ನೂ ಹೆಚ್ಚು ಮಳೆ ಬೀಳುವ ಸೂಚನೆ ಇರುವುದರಿಂದ ಆಸ್ಪತ್ರೆ ಒಳಗೆ ನೀರು ನುಗ್ಗುವ ಸಾಧ್ಯತೆಗಳಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಆಸ್ಪತ್ರೆಯ ಆಡಳಿತ ಅಧಿಕಾರಿಗಳು ಇತ್ತ ಗಮನಹರಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಆಸ್ಪತ್ರೆ ಬಡಾವಣೆಯ ನಿವಾಸಿ ರಮ್ಯಾ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net