ರೈನಥಾನ್‌ನಂತಹ ಕಾರ್ಯಕ್ರಮ ಇಂದಿನ ಅಗತ್ಯ : ಡಾ.ಸತೀಶ್ಚಂದ್ರ ಅಭಿಪ್ರಾಯ

New Project (6)
Published on

ಬೆಳ್ತಂಗಡಿ: ಯುವಜನತೆ ಮಾದಕ ಚಟಕ್ಕೆ ಬಲಿಯಾಗದಂತೆ ಸಂಘಟನೆಗಳು ಅವರನ್ನು ಒಗ್ಗೂಡಿಸಿ, ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸುವಂತಾಗಲು ರೈನಥಾನ್‌ನಂತಹ ಕಾರ್ಯಕ್ರಮಗಳು ಇಂದು ಅಗತ್ಯ ಎಂದು ಉಜಿರೆ ಎಸ್‌ಡಿಎಂ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಹೇಳಿದರು.

ಉಜಿರೆಯಲ್ಲಿ ಆಯೋಜಿಸಲಾಗಿದ್ದ ರೈನಥಾನ್‌ನ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈನಥಾನ್ ಆಯೋಜನಾ ಸಮಿತಿ ಅಧ್ಯಕ್ಷ ಪ್ರವೀಣ್ ಗೋರೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂ ಆಸ್ಪತ್ರೆ ಎಂಡಿ ಜನಾರ್ದನ ಎಂ., ಉದ್ಯಮಿಗಳಾದ ರಾಗ್ನೇಶ್, ರಾಜೇಶ್ ಪೈ, ದಿ ಓಷಿಯನ್ ಪರ್ಲ್ ಜನರಲ್ ಮ್ಯಾನೇಜರ್ ಉಪೇಂದ್ರ ಶಾನುಭಾಗ್, ಸಿರಿ ಸಂಸ್ಥೆಯ ಎಂಡಿ ಕೆ.ಎನ್.ಜನಾರ್ದನ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಪುತ್ತೂರು ಅಧ್ಯಕ್ಷೆ ಡಾ.ಆಶಾ ರಾಘವೇಂದ್ರ, ಉಜಿರೆ ಎಸ್‌ಡಿಎಂ ಕಾಲೇಜು ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ, ರೋಟರಿ ಕ್ಲಬ್ ಬೆಳ್ತಂಗಡಿ ನಿಯೋಜಿತ ಅಧ್ಯಕ್ಷ ಪ್ರಕಾಶ್ ಪ್ರಭು, ನಿಯೋಜಿತ ಕಾರ್ಯದರ್ಶಿ ಡಾ.ದಯಾಕರ ಎಂ.ಎಂ., ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜೇತರ ವಿವರ

  • 16 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ಧಾರವಾಡದ ಶಾಹಿನ್ ಎಸ್.ಆರ್.(ಪ್ರಥಮ), ಆಳ್ವಾಸ್‌ನ ಚರಿಷ್ಮಾ(ದ್ವಿತೀಯ), ಆಳ್ವಾಸ್‌ನ ಪ್ರಣಮ್ಯಾ ಎನ್.(ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.
  • 16 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಬಾಗಲಕೋಟೆ ಶಿವಾನಂದ ಬೆಗರಿ(ಪ್ರ), ಹುಬ್ಬಳ್ಳಿಯ ನಾಗರಾಜು(ದ್ವಿ), ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನ ರಂಗಣ್ಣ(ತೃ) ಸ್ಥಾನ ಪಡೆದುಕೊಂಡಿದ್ದಾರೆ.
  • 50 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಮಂಗಳೂರಿನ ನಾರಾಯಣ ಮೂಲ್ಯ(ಪ್ರ), ರವಿ(ದ್ವಿ), ಎಂಆರ್‌ಪಿಎಲ್‌ನ ಬೇಬಿ ವರ್ಗೀಸ್(ತೃ) ಸ್ಥಾನ ಪಡೆದುಕೊಂಡಿದ್ದಾರೆ.
  • 50 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ಬೀನಾ ಫರ್ನಾಂಡಿಸ್(ಪ್ರ), ಯಶೋದಾ(ದ್ವಿ), ಶೈಲಜಾ ಎ.ಎನ್.(ತೃ) ಸ್ಥಾನ ಪಡೆದುಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net