ಆಧುನಿಕತೆ ಭರಾಟೆಯಲ್ಲೂ ಮಣ್ಣಿನ ಕ್ರೀಡೆ ರಕ್ಷಣೆ : ಭಾಗೀರಥಿ ಮುರುಳ್ಯ ಮೆಚ್ಚುಗೆ

New Project (2)
Published on

ವಿಜಯವಾಣಿ ಸುದ್ದಿಜಾಲ ಕಡಬ

ಆಧುನಿಕತೆ ಭರಾಟೆಯಲ್ಲಿ ಆರೋಗ್ಯಕರ ಜೀವನ ಮರೆಯಾಗುತ್ತಿವೆ. ಕೆಸರುಗದ್ದೆ ಕ್ರೀಡಾಕೂಟ ನಡೆಸುವ ಮೂಲಕ ಯುವ ಪೀಳಿಗೆಗೆ ಮಣ್ಣಿನ ಮಹತ್ವ ಹಾಗೂ ಸಾಂಪ್ರಾದಾಯಿಕ ಕ್ರೀಡೆ ತಿಳಿಸುವ ಕೆಲಸವಾಗಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಇಡ್ಯಾಡಿ ಗೆಳೆಯರ ಬಳಗ, ಸವಣೂರು ಯುವಕ ಮಂಡಲ ವತಿಯಿಂದ ಶ್ರೀ ಆದಿಶಕ್ತಿ ಭಜನಾ ಮಂಡಳಿ ಪೆರಿಯಡ್ಕ, ಬಿಜೆಪಿ ಬೂತ್ ಸಮಿತಿ 66 ಮೊಗರು ಸೇವಾ ಭಾರತಿ ಸವಣೂರು, ಅಶ್ವಿನಿ ಗ್ರಾಮ ಪ್ರತಿಷ್ಠಾನ ಸವಣೂರು ಸಹಕಾರದೊಂದಿಗೆ ಇಡ್ಯಾಡಿ ಪರಮೇಶ್ವರ ಅವರ ಗದ್ದೆಯಲ್ಲಿ ಕೆಸರ‌್ಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸವಣೂರು ಗ್ರಾಪಂ ಅಧ್ಯಕ್ಷೆ ಸುಂದರಿ ಬಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸದಸ್ಯ ದಿನೇಶ್ ಮೆದು, ರಾಜ್ಯ ಯುವಜನ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಬಿಜೆಪಿ ಸುಳ್ಯ ಮಂಡಲ ಎಸ್.ಟಿ. ಮೋರ್ಚಾ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ., ಸವಣೂರು ಸಿ.ಎ. ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಯುವಕ ಮಂಡಲ ಕಾರ್ಯದರ್ಶಿ ಕೀರ್ತನ್ ಕೋಡಿಬೈಲು, ಪರಮೇಶ್ವರ ಇಡ್ಯಾಡಿ, ಕೃಷಿಕರಾದ ಗಂಗಮ್ಮ ಇಡ್ಯಾಡಿ ಉಪಸ್ಥಿತರಿದ್ದರು. ಉದ್ಯಮಿ ರಾಜರಾಮ ಪ್ರಭು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ರಾಜೇಶ್ ಇಡ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net