ಸಿಎಂ ಭಾಷಣ ವೇಳೆಯೇ ಸುರಿದ ಮಳೆ

Rain_Effect
Published on

ತುಮಕೂರು: ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ದಿನಪೂರ್ತಿ ಸುರಿದ ಜಿಟಿಜಿಟಿ ಮಳೆ ಅಡ್ಡಿಯಾಗಿತ್ತು. ವೇದಿಕೆ, ಸಭಾಂಗಣಕ್ಕೆ ಜರ್ಮನ್​ ಟೆಂಟ್​ ಅಳವಡಿಸಿದ್ದರಿಂದ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತಾದರೂ ಜನರು ಕಾರ್ಯಕ್ರಮ ಮುಗಿದ ನಂತರ ಮಳೆಯಲ್ಲಿಯೇ ವಾಹನಗಳ ಬಳಿಗೆ ತೆರಳುವಂತಾಯಿತು.

ಸಿಎಂ ಸಿದ್ದರಾಮಯ್ಯ ಭಾಷಣೆ ಆರಂಭಿಸುತ್ತಿದ್ದಂತೆಯೇ ಮಳೆ ಜೋರಾಗಿ ಸುರಿಯಿತು, ಟೆಂಟ್​ ಕೊನೆಯ ಭಾಗದಲ್ಲಿ ಕುಳಿತಿದ್ದವರಿಗೆ ಮಳೆ ತೊಂದರೆ ನೀಡಿತು. ಕೆಲವರು ಮಳೆಯಿಂದ ರಕ್ಷಣೆ ಪಡೆಯಲು ಕುರ್ಚಿಗಳ ಮೊರೆಯೋದರು. ಸಿಎಂ ಓಡಾಡಿದ ಮಾರ್ಗದಲ್ಲಿ ರ್ನಿದಿಷ್ಟ ಸಮಯದಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿಬಂರ್ಧವಿದ್ದ ಕಾರಣದಿಂದ ಜನರಿಗೂ ಕೊಂಚ ತೊಂದರೆಯಾಯಿತು.

ಕಾರ್ಯಕ್ರಮಕ್ಕೆ ಜಿಲ್ಲೆಯೆಲ್ಲೆಡೆಯಿಂದ ಆಗಮಿಸಿದ್ದ ಲಾನುಭವಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತಾದರೂ ಜಿಟಿಜಿಟಿ ಮಳೆಯಲ್ಲಿ ಊಟ ಮಾಡಲು ಬಹುತೇಕರಿಗೆ ಸಾಧ್ಯವಾಗಲೇ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net