ಮಳೆಗೆ ತೀವ್ರಗೊಂಡ ಕಡಲ್ಕೊರೆತ : ಕಡಲೊಡಲು ಸೇರಿದ ತಡೆಗೋಡೆ ಕಲ್ಲುಗಳು

sea
ಮರವಂತೆ ಹೊರ ಬಂದರು ಸಮೀಪ ನಿರ್ಮಿಸಲಾಗಿರುವ ತಡೆಗೋಡೆಗೆ ಕಡಲಿನ ಅಲೆಗಳು ಅಪ್ಪಳಿಸುತ್ತಿದೆ
Published on

ಗಂಗೊಳ್ಳಿ: ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮರವಂತೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಮರವಂತೆ ಹೊರ ಬಂದರು ಸಂಪರ್ಕಿಸುವ ರಸ್ತೆ ಬೊಬ್ಬರ್ಯ ದೇವಸ್ಥಾನ ಸಮೀಪ ನಿರ್ಮಿಸಲಾಗಿರುವ ತಡೆಗೋಡೆಗೆ ಕಡಲಿನ ಭಾರಿ ಅಲೆಗಳು ಒಂದರ ಹಿಂದೊಂದು ಅಪ್ಪಳಿಸುತ್ತಿದ್ದು, ತಡೆಗೋಡೆ ಕಲ್ಲುಗಳು ಕುಸಿದು ಕಡಲ ಒಡಲು ಸೇರುತ್ತಿವೆ. ತಡೆಗೋಡೆ ಕುಸಿಯುತ್ತಿರುವುದರಿಂದ ಅದಕ್ಕೆ ತಾಗಿಕೊಂಡಿರುವ ಸಂಪರ್ಕ ರಸ್ತೆ ಅಪಾಯದಂಚಿನಲ್ಲಿದೆ.

ಕಡಲಿನ ರಕ್ಕಸ ಅಲೆ ತಡೆಗೋಡೆ ದಾಟಿ ತೀರ ಪ್ರದೇಶದತ್ತ ಮುನ್ನುಗುತ್ತಿದೆ. ಮೂರು ವರ್ಷದ ಹಿಂದೆ ಕಾಣಿಸಿಕೊಂಡಿದ್ದ ತೌಖ್ತೆ ಚಂಡಮಾರುತದ ಸಂದರ್ಭ ಕಡಲ ಅಲೆಗಳ ಆರ್ಭಟಕ್ಕೆ ಈ ಸಂಪರ್ಕ ರಸ್ತೆ ಕೊಚ್ಚಿ ಹೋಗಿ ಕಡಲ ತಟದಲ್ಲಿರುವ ಮನೆ ಕೊಚ್ಚಿ ಹೋಗವ ಸಂಭವ ಇದ್ದಿತ್ತು. ಸಮುದ್ರದ ಅಲೆಗಳ ಆರ್ಭಟ ದಿನೇದಿನೆ ಹೆಚ್ಚಾಗುತ್ತಿದ್ದು, ಹೊರ ಬಂದರು ಸಮೀಪ ನಿರ್ಮಿಸಲಾಗಿರುವ ತಡೆಗೋಡೆ ಕಲ್ಲುಗಳು ಕುಸಿಯುತ್ತಿದೆ. ಇನ್ನೊಂದೆಡೆ ಮರವಂತೆ ಹೊರಬಂದರು ಪ್ರದೇಶ ಕೂಡ ಕಡಲ್ಕೊರೆತದಿಂದ ತತ್ತರಿಸಿದ್ದು, ಮಳೆ ಆರ್ಭಟ ಹೆಚ್ಚಾದರೆ ಮೂರು ವರ್ಷದ ಹಿಂದಿನ ಸ್ಥಿತಿ ಮತ್ತೊಮ್ಮೆ ಮರುಕಳಿಸುವ ಸಾಧ್ಯತೆ ದಟ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net