ಸ್ವಯಂಸೇವಕರಿಂದ ಪರಿಹಾರ ಕಾರ್ಯ : ಸಮೃದ್ಧ ಜನಸೇವಾ ಟ್ರಸ್ಟ್‌ನಿಂದ ಊಟದ ವ್ಯವಸ್ಥೆ

volunteers
ನಿರಂತರ ಮಳೆಯಿಂದಾಗಿ ಜಲಾವೃಗೊಂಡಿರುವ ನಾವುಂದ ಬಡಾಕೆರೆ, ಸಾಲ್ಬುಡದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ಸ್ವಯಂ ಸೇವಕರಿಗೆ ಬೈಂದೂರಿನ ಸಮೃದ್ಧ ಜನಸೇವಾ ಟ್ರಸ್ಟ್ ವತಿಯಿಂದ ಊಟದ ಪ್ಯಾಕೇಟ್ ವಿತರಿಸಲಾಯಿತು
Published on

ಬೈಂದೂರು: ನಿರಂತರ ಮಳೆಯಿಂದಾಗಿ ಜಲಾವೃತಗೊಂಡಿರುವ ನಾವುಂದ ಬಡಾಕೆರೆ, ಸಾಲ್ಬುಡದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಕರಿಗೆ ಬೈಂದೂರಿನ ಸಮೃದ್ಧ ಜನಸೇವಾ ಟ್ರಸ್ಟ್ ವತಿಯಿಂದ ಊಟದ ಪ್ಯಾಕೇಟ್ ವಿತರಿಸಲಾಯಿತು.

ನಾವುಂದ ಗ್ರಾಮದ ಬಡಾಕೆರೆ ಹಾಗೂ ಸಾಲ್ಬುಡದಲ್ಲಿ 80 ಮನೆ ಜಲದಿಗ್ಭಂದನಕ್ಕೆ ಒಳಗಾಗಿದ್ದವು. ಪ್ರವಾಹ ಭೀತಿ ಎದುರಾಗುತ್ತಿದ್ದಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆಯಂತೆ 50ಕ್ಕೂ ಮಿಕ್ಕಿ ಸ್ವಯಂಸೇವಕರ ತಂಡ ಪರಿಹಾರ ಕಾರ್ಯಕ್ಕೆ ಧುಮುಕಿ ಪ್ರವಾಹ ಪೀಡಿತ ಗ್ರಾಮದ ಜನರಿಗೆ ಅಗತ್ಯ ಸಹಾಯ ಒದಗಿಸುವ ಕೆಲಸದಲ್ಲಿ ತೊಡಗಿಕೊಂಡಿತ್ತು.

ತುರ್ತು ಕಾರ್ಯದ ನಿಮಿತ್ತ ಬೆಂಗಳೂರಿನಲ್ಲಿರುವ ಶಾಸಕ ಗುರುರಾಜ್ ಗಂಟಿಹೊಳೆ ನೆರೆ ಭೀತಿ ವಿಷಯ ತಿಳಿಯುತ್ತಿದ್ದಂತೆ, ಅಧಿಕಾರಿಗಳಿಗೆ ದೂರವಾಣಿ ಕರೆಮಾಡಿ ಆಡಳಿತ ಯಂತ್ರ ಚುರುಕುಗೊಳಿಸಿ ಪ್ರವಾಹ ಪೀಡಿತ ಗ್ರಾಮದ ಜನರ ರಕ್ಷಣೆಗೆ ಧಾವಿಸುವಂತೆ ಸೂಚನೆ ನೀಡಿದ್ದರು. ಬೈಂದೂರು ತಾಲೂಕು ಆಡಳಿತ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಕಾರ್ಯಾಚರಣೆಗೆ ಇಳಿದಿದ್ದರು.

ನೆರೆಪೀಡಿತ ಪ್ರದೇಶಕ್ಕೆ ಸಮೃದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷ, ಉದ್ಯಮಿ ಬಿ.ಎಸ್.ಸುರೇಶ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಖಜಾಂಚಿ ಗಣೇಶ್ ಗಾಣಿಗ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಸೋಮಯ್ಯ, ಮಂಡಲ ಕಾರ್ಯದರ್ಶಿ ಪ್ರಸಾದ್ ಪಿ.ಬೈಂದೂರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net