ಶಾಲಾರಂಭಕ್ಕೆ ಅಡ್ಡಿಯಾದ ಮಳೆ ನೀರು

New Project (31)
Published on

ಉಳ್ಳಾಲ: ಕಳೆದ ವಾರವಿಡೀ ಸುರಿದ ಮಳೆ ಅದರಲ್ಲೂ ಮೇ 30ರಂದು ಸುರಿದ ಭಾರೀ ಮಳೆಯಿಂದಾಗಿ ಶಾಲೆಗಳಿಗೆ ನೀರು ನುಗ್ಗಿದ್ದ ಪರಿಣಾಮ ಸೋಮವಾರ ನಡೆಯಬೇಕಿದ್ದ ಶಾಲಾರಂಭಕ್ಕೆ ಅಡ್ಡಿಯಾಗಿದೆ.

ನಗರಸಭಾ ವ್ಯಾಪ್ತಿಯ ಅಳೇಕಲ ಮದನಿ ಶಿಕ್ಷಣ ಸಂಸ್ಥೆಗೆ ಕೃತಕ ನೆರೆಯಿಂದಾಗಿ ಶಾಲೆಗೆ ನೀರು ನುಗ್ಗಿತ್ತು. ಘಟನೆ ನಡೆದ ಸಂದರ್ಭ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ತಂದಿಡಲಾಗಿದ್ದ ಪಠ್ಯ ಪುಸ್ತಕ, ಸಮವಸ್ತ್ರ, ಕಂಪ್ಯೂಟರ್, ಇನ್ವರ್ಟರ್, ವಿದ್ಯುತ್ ಉಪಕರಣಗಳು ಸಂಪೂರ್ಣ ಹಾನಿಗೀಡಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಉಚ್ಚಿಲಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿಗಳಿಗೆ ನೀರು ನುಗ್ಗಿದ ಪರಿಣಾಮ ಶಾಲಾ ಪುಸ್ತಕ, ಬಿಸಿಯೂಟದ ಸಾಮಗ್ರಿ, ಮೊಟ್ಟೆ ಮೊದಲಾದ ಸಾಮಗ್ರಿಗಳು ಹಾನಿಯಾಗಿತ್ತು. ಸೋಮವಾರ ಶಾಲಾರಂಭಗೊಂಡಿದ್ದು ಪುಸ್ತಕಗಳನ್ನು ಒಣಗಿಸುವುದು, ಹಾನೀಗೀಡಾದ ವಸ್ತುಗಳ ದುರಸ್ತಿ, ಶಾಲೆಯೊಳಗೆ ನೀರಿನ ಜತೆ ಕೆಸರು ನುಗ್ಗಿದ್ದನ್ನು ಶುದ್ಧೀಕರಿಸುವ ಕಾರ್ಯ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net