ಹುಬ್ಬಿ ಅಬ್ಬರಕ್ಕೆ  ಉಕ್ಕೇರಿದ ನದಿಹಳ್ಳ

IMG-20230905-WA0018
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹುಬ್ಬಿ ಮಳೆಯ ಅಬ್ಬರ ಕಲಬುರಗಿ ಜಿಲ್ಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಜೋರಾಗಿದೆ. ಭಾನುವಾರ ತಡರಾತ್ರಿಯಿಂದಲೇ ಹಲವು ಕಡೆಗಳಲ್ಲಿ ಬಿರುಸಿನ ಮಳೆಯಾಗಿದ್ದರಿಂದ ನದಿ, ಹಳ್ಳ-ಕೊಳ್ಳಗಳು ಉಕ್ಕೇರಿ ಹರಿಯುತ್ತಿವೆ. ಚಿಂಚೋಳಿ, ಕಾಳಗಿ ತಾಲೂಕಿನ ಕೆಲ ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿತ್ತು.  ಮೋಡ ಕವಿದ ವಾತಾವರಣ ಮುಂದುವರೆದಿದೆ. ನಿರಂತರ ಮಳೆಯಿಂದಾಗಿ  ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಜನರು ಹೈರಾಣ ಆದರು.
ಚಿಂಚೋಳಿ ತಾಲೂಕಿನ ದೋಟಿಕೊಳ ಗ್ರಾಮದ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ಮಾರುತಿ ಎಂಬ ಯುವಕನನ್ನು ಜನರು ರಕ್ಷಣೆ ಮಾಡಿದ್ದಾರೆ. ಇನ್ನೂ ಸೇಡಂ ತಾಲೂಕಿನಲ್ಲಿ ಸಹ ಮಳೆ ಬಿರುಸಾಗಿದೆ. ಸೇಡಂ ಪಟ್ಟಣದಲ್ಲಿರುವ ಪೊಲೀಸ್ ಠಾಣೆ ಜಲಾವೃತ್ತಗೊಂಡು, ಠಾಣೆಯೊಳಗೆ ನೀರು ನುಗ್ಗಿದೆ. ರೈಲು ನಿಲ್ದಾಣದ ಆವರಣದಲ್ಲಿ ನೀರು ತುಂಬಿದೆ. ಮುನ್ಸೂಚನೆಯಂತೆ ಇನ್ನೆರಡು ದಿನಗಳ ಕಾಲ ಮಳೆ ಮುಂದುವರೆಯು ಸಾಧ್ಯತೆ ಇದೆ.
ಕಳೆದೊಂದು ತಿಂಗಳಿAದ ಕಾಣೆಯಾಗಿದ್ದ ಮಳೆರಾಯ ಕಳೆದ ಮೂರು ದಿನಗಳಿಂದ  ಕೃಪೆ ತೋರಿದ್ದರಿಂದ ಬೆಳೆಗಳಿಗೆ ಆಸರೆಯಾಗಿದೆ. ಒಣಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ಬಂದಿದೆ. ಎಲ್ಲಡೆ ತಂಪನೆಯ ವಾತಾವರಣ ನಿರ್ಮಾಣಗೊಂಡಿದೆ. ಕಳೆದ ೨೪ ಗಂಟೆಗಳಲ್ಲಿ ಚಿಂಚೋಳಿ ತಾಲೂಕಿನಲ್ಲಿ ಅತಿ ೬೧ ಎಂಎAಹೆಚ್ಚಿನ ಮಳೆಯಾಗಿದೆ.  ಕಾಳಗಿಯಲ್ಲಿ ೫೯.೪ ಎಂಎA  ಮಳೆಯಾಗಿದೆ. ಸರಾಸರಿ ಜಿಲ್ಲೆಯಲ್ಲಿ ೨೬ ಎಂಎA ಮಳೆಯಾಗಿದೆ.
ಮಳೆಯಿಂದಾಗಿ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಕೆಲವು ಹಳ್ಳಿಗಳ ನಡುವೆ ಸಂಪರ್ಕ ಕಡಿತಗೊಂಡಿತ್ತು. ಜನರು ಪರದಾಡಿದರು. ಕೆಲವಡೆ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಇನ್ನೂ ಅಬ್ಬರ ಮಳೆಯಿಂದಾಗಿ ಜಮೀನುಗಳಲ್ಲಿ ನೀರು ತುಂಬಿಕೊAಡಿದೆ. ಹೀಗಾಗಿ ತೊಗರಿ, ಸೂರ್ಯಕಾಂತಿ, ಹತ್ತಿ, ಉದ್ದು ಇನ್ನಿತರ ಬೆಳೆಗಳು ನೀರಿನಲ್ಲಿ ನಿಂತುಕೊAಡಿವೆ.
ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿಯವರೆಗೂ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ತುಂಬೆಲ್ಲಾ ಉತ್ತಮ ಮಳೆಯಾಗಿದೆ.  
ಶ್ರಾವಣ ಮಾಸದ ಶುರುವಾದಾಗಿನಿಂದಲೂ ಮಘ (ಮಗಿ) ಮಳೆ ಬರಲಿಲ್ಲ. ಹುಬ್ಬಾ ಅನುವು ಮಾಡಿಕೊಟ್ಟಿದೆ. ರೈತರ ಬವಣಗೆ ತಾತ್ಕಾಲಿಕ ಪರಿಹಾರ ಸಿಕ್ಕಂತೆ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net