ಹನೂರು ಹಲವೆಡೆ ಮಳೆ

06 HANUR 2.
Published on

ಹನೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೋಮವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿಯಿತು.


ಮಧ್ಯಾಹ್ನ ಬಳಿಕ ಮೋಡ ಕವಿದ ವಾತಾವರಣವಿತ್ತು. ಸಂಜೆ 5ರ ವೇಳೆಗೆ ಮಂಗಲ, ಕಣ್ಣೂರು, ಆನಾಪುರ, ಗುಂಡಾಪುರ, ಬೂದುಬಾಳು, ಕಾಮಗೆರೆ, ಸಿಂಗಾನಲ್ಲೂರು ಸೇರಿದಂಗೆ ಹಲವೆಡೆ ಅರ್ಧ ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿಯಿತು.


ಹನೂರು ಪಟ್ಟಣ, ಲೊಕ್ಕನಹಳ್ಳಿ ಹಾಗೂ ರಾಮಾಪುರದ ಕಡೆಗಳಲ್ಲಿ ತುಂತುರು ಮಳೆಯಾಗಿದೆ. ಮಳೆಯಿಂದಾಗಿ ಕಾಮಗೆರೆ ಗ್ರಾಮದಲ್ಲಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಯಿತು. ರಾಗಿ, ಹುರುಳಿ ಹಾಗೂ ಮುಸುಕಿನ ಜೋಳದ ಪೈರುಗಳಿಗೆ ಮಳೆ ಅನುಕೂಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net