ಬೆಟ್ಟದಪುರ ವ್ಯಾಪ್ತಿಯಲ್ಲಿ ಜಿಟಿಜಿಟಿ ಮಳೆ

02BTP15
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಜಿಟಿಜಿಟಿ ಮಳೆ ಸುರಿಯಿತು.


ಈ ಭಾಗದಲ್ಲಿ ಈಗಾಗಲೇ ಕೃಷಿಕರು ತಂಬಾಕು ಎಲೆಗಳ ಹದ ಮಾಡುವ ಪ್ರಕ್ರಿಯೆ ಹಾಗೂ ಭತ್ತದ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ. ಎಡಬಿಡದೆ ಮಳೆ ಸುರಿದ ಕಾರಣ ಕೃಷಿ ಚಟುವಟಿಕೆಗೆ ಅಡ್ಡಿಯಾಯಿತು. ಶಾಲಾ-ಕಾಲೇಜಿಗೆ ತೆರಳಲು ುಕ್ಕಳಿಗೆ ಸಮಸ್ಯೆಯಾಯಿತು. ಬೆಟ್ಟದಪುರ, ಈಚೂರು, ಕೂರಗಲ್ಲು, ಜೋಗನಹಳ್ಳಿ, ಭುವನಹಳ್ಳಿ, ಬೆಟ್ಟದತುಂಗ, ಗೊರಹಳ್ಳಿ, ಚಿಕ್ಕನೇರಳೆ, ಹಾರನಹಳ್ಳಿ, ಚಪ್ಪರದಹಳ್ಳಿ, ವಡ್ಡರಬೈಲಕುಪ್ಪೆ, ಸುರಗಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆ ಸುರಿಯಿತು. ಈಗಾಗಲೇ ತುಂಬಿ ಹರಿಯುತ್ತಿದ್ದ ಕರೆ ಕಟ್ಟೆಗಳು ಮತ್ತೆ ಕೋಡಿಬಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net