ರಾಜಧಾನಿಯಲ್ಲಿ ಮಳೆ ಸಿಂಚನ: ಇನ್ನೆರಡು ದಿನ ಗುಡುಗು-ಮಿಂಚು ಸಹಿತ ಆಲಿಕಲ್ಲು ಮಳೆ

Rain Vehicle Road
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಮೇಲ್ಮೈ ಸುಳಿಗಾಳಿ ಪರಿಣಾಮ ರಾಜಧಾನಿಯಲ್ಲಿ ಸೋಮವಾರ ಮಳೆ ಸಿಂಚನವಾಗಿದೆ. ಬಿಸಿಲು ಧಗೆಯಿಂದ ಬಸವಳಿದಿದ್ದ ಜನತೆಗೆ ವರುಣ ತಂಪರೆದಿದ್ದಾನೆ.

ಮಧ್ಯಾಹ್ನದಿಂದ ಹಲವು ಬಡಾವಣೆಗಳಲ್ಲಿ ಮೋಡ ಕವಿದ ವಾತಾವರಣ ಇತ್ತು. ಬಸವೇಶ್ವರನಗರ, ಪೀಣ್ಯ ಸೇರಿ ಇತರ ಬಡಾವಣೆಗಳಲ್ಲಿ ರಾತ್ರಿ ವೇಳೆ ಕೆಲ ಕಾಲ ಮಳೆ ಸುರಿಯಿತು. ಕೆಲವರು ಮಳೆಯಲ್ಲಿ ವಾಹನಗಳ ಮೂಲಕ ನೆನೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

2 ದಿನ ಮಳೆ: ಸಿಲಿಕಾನ್ ಸಿಟಿಯಲ್ಲಿ ಮುಂದಿನ 2 ದಿನ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಸೋಮವಾರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನದಲ್ಲಿ 34 ಡಿಗ್ರಿ ಹಾಗೂ ಕನಿಷ್ಠ ತಾಪಮಾನದಲ್ಲಿ 22.5 ಡಿಗ್ರಿ ಸೆಲ್ಸಿಯಷ್ ಉಷ್ಣಾಂಶ ದಾಖಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಬಿಸಿಲಿನ ಝಳ ಹೆಚ್ಚಾಗುತ್ತಿರುವ ಕಾರಣದಿಂದ ಜನರು ತತ್ತರಿಸಿದ್ದಾರೆ. ತಾಪಮಾನ ಏರಿಳಿತದಿಂದ ಈಗಾಗಲೇ ಜನರಿಗೆ ಸಖೆ ಅನುಭವವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net