ಸತತ ಮಳೆಗೆ ಜನರು ಹೈರಾಣ

ಹಟ್ಟಿಚಿನ್ನದಗಣಿಯ ಕಾಲನಿಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದು.
ಹಟ್ಟಿಚಿನ್ನದಗಣಿಯ ಕಾಲನಿಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದು.
Published on

ಹಟ್ಟಿ ಚಿನ್ನದಗಣಿ: ಹಟ್ಟಿ ಪಟ್ಟಣ, ಹಟ್ಟಿ ಕ್ಯಾಂಪ್ ಹಾಗೂ ಅನ್ವರಿ, ಪೈದೊಡ್ಡಿ, ಗೆಜ್ಜಲಗಟ್ಟಾ, ರೋಡಲಬಂಡಾ(ತವಗ), ಕೋಠಾ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಬುಧವಾರ ತಡರಾತ್ರಿ ಉತ್ತಮ ಮಳೆಯಾಗಿದೆ. ಸತತ 10 ದಿನಗಳಿಂದ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಕಳೆದರೆಡು ದಿನಗಳಿಂದ ಮಳೆ ಜೋರು

ಕಳೆದೆರಡು ದಿನಗಳಿಂದ ಮಳೆ ಜೋರಾಗಿದ್ದು, ಕಾಲನಿಗಳಲ್ಲಿ ಚರಂಡಿಯಲ್ಲಿ ನೀರು ತುಂಬಿ ಹರಿಯುತ್ತಿದೆ. ಮಳೆಯ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಡಳಿತ ಗುರುವಾರ ಹಟ್ಟಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಆದರೂ ಬೆಳಗ್ಗೆ ಕೆಲ ವಿದ್ಯಾರ್ಥಿಗಳು ಮಾಹಿತಿ ಕೊರತೆಯಿಂದ ಪಟ್ಟಣಕ್ಕೆ ಬಂದು ವಾಪಸ್ಸಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net