More

    ಧಾರಾಕಾರ ಮಳೆ ನಡುವೆಯೇ ಕಾಣಿಸಿಕೊಂಡ ಹೆರಿಗೆ ನೋವು! JCB ಸಹಾಯದಿಂದ ಹೊಳೆ ದಾಟಿಸಿದ ಸ್ಥಳೀಯರು

    ತೆಲಂಗಾಣ: ಧಾರಾಕಾರ ಮಳೆ ನಡುವೆಯೇ ಮಹಿಳೆಯೊಬ್ಬಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೆರಿಗೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ಸ್ಥಳೀಯರು ಕಷ್ಟಪಟ್ಟು ಜೆಸಿಬಿ ಸಹಾಯದಿಂದ ನದಿ ದಾಟಿಸಿದ್ದಾರೆ. ಜಗಿತ್ಯಾಲ ಜಿಲ್ಲೆಯ ಮೇಡಿಪಲ್ಲಿ ಮಂಡಲದ ರಾಜಲಿಂಗಂಪೇಟೆಯಲ್ಲಿ ಈ ಘಟನೆ ನಡೆದಿದೆ.

    ಇದನ್ನೂ ಓದಿ: ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕನನ್ನು ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು, ಆಮೇಲಾಗಿದ್ದೇನು? 
    ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ಆಕೆಯನ್ನು ಕೋರುಟ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲು ಯತ್ನಿಸಿದ್ದಾರೆ. ಆದರೆ, ಗ್ರಾಮದ ಸಮೀಪ ರಸ್ತೆಗೆ ಅಡ್ಡಲಾಗಿ ನೀರು ಹರಿಯುತ್ತಿದ್ದರಿಂದ ರಸ್ತೆ ದಾಟಲು ಸಾಧ್ಯವಾಗಲಿಲ್ಲ.

    ಇದನ್ನೂ ಓದಿ: ಟ್ರಾಫಿಕ್ ಕಿರಿ ಕಿರಿ; ಕಚೇರಿಗೆ ಹೋಗುವವರು ಸ್ವಂತ ಕಾರು ಬಳಸಬಾರದು ಎಂದ ಸೈಬರಾಬಾದ್ ಪೊಲೀಸರು 
    ಜಲಾವೃತಗೊಂಡ ರಸ್ತೆಯನ್ನು ದಾಟುವುದು ಹೇಗೆ ಎಂದು ಯೋಚಿಸಿದ್ದಾರೆ. ಅಸಹಾಯಕರಾದ ಕುಟುಂಬಸ್ಥರು ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ನಂತರ ಜೆಸಿಬಿ ವ್ಯವಸ್ಥೆ ಮಾಡುವ ಮೂಲಕ ಮಹಿಳೆಗೆ ರಸ್ತೆ ದಾಟಲು ಸಹಾಯ ಮಾಡಿದರು. ನಂತರ, ರಸ್ತೆಯ ಇನ್ನೊಂದು ಬದಿಯಲ್ಲಿ ಸಿದ್ಧವಾಗಿದ್ದ ಆಂಬ್ಯುಲೆನ್ಸ್‌ನಲ್ಲಿ ಆಕೆಯನ್ನು ಕೋರುಟ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

    ಮಳೆಗಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ ಎನ್ನುವ ಚಿಂತೆ ಇದ್ಯಾ? ಇಂತಿವೆ ಕೆಲವು ಸಲಹೆ, ಮುನ್ನೆಚ್ಚರಿಕೆಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts