ಬಿರುಗಾಳಿಯಿಂದ ತೋಟಕ್ಕೆ ಹಾನಿ

rain
ಬಿರುಗಾಳಿಯಿಂದ ತೋಟಕ್ಕೆ ಹಾನಿಯಾಗಿರುವುದು.
Published on

ಉಪ್ಪಿನಂಗಡಿ: ಶನಿವಾರದಿಂದ ಬಿರುಸುಗೊಂಡ ಮುಂಗಾರು ಮಳೆಯಿಂದಾಗಿ ಬೀಸಿದ ಬಿರುಗಾಳಿಗೆ ಶಿರಾಡಿ ಗ್ರಾಮದ ಕಡೆಂಬುರ ಎಂಬಲ್ಲಿ ಕೃಷಿ ಗೆ ಹಾನಿಯುಂಟಾಗಿದೆ.

ಕಡೆಂಬುರ ನಿವಾಸಿ ವೆಂಕಟರಮಣ ಗೌಡ ಎಂಬುವರ ತೋಟದಲ್ಲಿ ಬಿರುಗಾಳಿ ಭಾರಿ ಹಾನಿಯನ್ನುಂಟುಮಾಡಿದ್ದು, ನೂರಕ್ಕೂ ಮಿಕ್ಕಿದ ಅಡಕೆ ಮರಗಳು ತುಂಡರಿಸಲ್ಪಟ್ಟಿವೆ. ಅಡಕೆ ಒಣಗಿಸಲೆಂದು ಮಾಡಿರುವ ಸೋಲಾರ್ ಗೂಡು ಸಿಸ್ಟಮ್‌ನ್ನು ಸಂಪೂರ್ಣ ಧ್ವಂಸಗೊಳಿಸಿದೆ.
ಪರಿಸರದ ಹಲವೆಡೆ ಇದೇ ರೀತಿ ಹಾನಿಯುಂಟಾದ ಬಗ್ಗೆ ಮಾಹಿತಿ ಬಂದಿದ್ದು, ಘಟನಾ ಸ್ಥಳಗಳಿಗೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿದ್ದು, ನಷ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net