

ಹೊಸಪೇಟೆ: ವಿಧಾನಸಭಾ ಚುನಾವಣೆ ನಿಮಿತ್ತ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಗುರುವಾರ ನಗರದ ರೈಲು ನಿಲ್ದಾಣದಲ್ಲಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು. ನಿಲ್ದಾಣದ ದ್ವಾರ ಬಾಗಿಲ ಬಳಿ ಪ್ರಯಾಣಿಕರಿಗೆ ಗುಲಾಬಿ ಹೂವು ನೀಡುವ ಮೂಲಕ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಬಿ.ಸದಾಶಿವ ಪ್ರಭು, ತಪ್ಪದೆ ಮತದಾನ ಮಾಡುವಂತೆ ಮನವಿ ಮಾಡಿದರು.
ವಿವಿಧ ಕಲಾ ತಂಡಗಳು ಡೊಳ್ಳು ಬಾರಿಸುವುದರ ಜೊತೆಗೆ ರೈಲು ಪ್ರಯಾಣಿಕರಿಗೆ ಗುಲಾಭಿ ಹೂವಿನ ಜತೆಗೆ ಮತದಾನ ಜಾಗೃತಿಯ ಕರ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮನೋಹರ್, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಜಿ.ವಿ.ರಮೇಶ, ಯೋಜನಾ ನಿರ್ದೇಶಕ ಅನ್ನದಾನಯ್ಯ ಸ್ವಾಮಿ, ನಾಗರಾಜ, ಆರತಿ ಇದ್ದರು.