More

    ಪ್ಯಾರಾಗ್ಲೈಡಿಂಗ್‌ಮೂಲಕ ಮತದಾನ ಜಾಗೃತಿಗೆ ಜಿಲ್ಲಾಧಿಕಾರಿ ಚಾಲನೆ

    ಹಾಸನ: ಕಳೆದ ಬಾರಿ ಜಿಲ್ಲೆಯಲ್ಲಿ ಕಡಿಮೆ ಮತದಾನವಾಗಿದ್ದು ಶೇ. ನೂರರಷ್ಟು ಮತದಾನ ಆಗುವ ನಿಟ್ಟಿನಲ್ಲಿ ನಗರದ ಬೂವನಹಳ್ಳಿ ಎಲಿಪ್ಯಾಡ್ ಆವರಣದಲ್ಲಿ ಪ್ಯಾರಾಗ್ಲೈಡಿಂಗ್‌ಮೂಲಕ ವಿನೂತನ ಮತದಾನ ಜಾಗೃತಿ ಪ್ರಯೋಗಕ್ಕೆ ಜಿಲ್ಲಾ ಚುನಾವನಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಬುಧವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
    ಪ್ಯಾರಾಗ್ಲೈಡಿಂಗ್ ಮೇಲೆ ಕುಳಿತು ಭಾಗವಹಿಸುವ ಮೂಲಕ ಮತದಾನ ಜಾಗೃತಿ ಬಗ್ಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ವಿನೂತನವಾಗಿ ಮತದಾನದ ಬಗ್ಗೆ ಅರಿವು ಮೂಡಿಸುವುದಕ್ಕೆ ಪ್ಯಾರಾಗ್ಲೈಡಿಂಗ್‌ಮೂಲಕ ಪ್ರಯೋಗ ಮಾಡಲಾಗುತ್ತಿದೆ ನಗರ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಸಂಚರಿಸುವ ಮೂಲಕ ಮತದಾನ ಅರಿವು ಮೂಡಿಸಲಿದೆ ಎಂದರು.
    ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ ಅವರು ಮಾತನಾಡಿ,ಪ್ಯಾರಾಗ್ಲೈಡಿಂಗ್ ಮೂಲಕ ವಿಶೇಷ ಪ್ರಯತ್ನ ಹಮ್ಮಿಕೊಳ್ಳುವುದರ ಮೂಲಕ ಮತದಾರರಲ್ಲಿ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
    ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಪರಪ್ಪಸ್ವಾಮಿ ಮಾತನಾಡಿ, ಚುನಾವಣೆ ಆಯೋಗದ ನಿರ್ದೇಶನದಂತೆ ಪ್ಯಾರಾಗ್ಲೈಡಿಂಗ್ ಮೋಟರ್ ಮೂಲಕ ಮತದಾನದ ಜಾಗೃತಿ ಮುಡಿಸುತ್ತಿದ್ದು, ಕಡ್ಡಾಯವಾಗಿ 18 ವರ್ಷ ತುಂಬಿದ ಎಲ್ಲರೂ ಮತ ಕೇಂದ್ರಕ್ಕೆ ಬಂದು ಮತದಾನ ಮಾಡುವ ಮೂಲಕ ಶೇಕಡ ನೂರರಷ್ಟು ಮತದಾನ ಮಾಡುವ ಮೂಲಕ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
    ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪುರ್ಣಿಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ರವರು ಪ್ಯಾರಾಗ್ಲೈಡಿಂಗ್‌ಮೋಟರ್ ಮೂಲಕ ಆಗಸದಲ್ಲಿ ಹಾರುಡುವ ಮೂಲಕ ವಿಶೇಷವಾಗಿ ಮತದಾನ ಜಾಗೃತಿ ಮೂಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts