ರೈಲ್ವೆ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣ : ಕೇಂದ್ರ ಸಚಿವ ಸೋಮಣ್ಣ

Somanna_Railway
Published on

ತುಮಕೂರು: ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದಾಗಿ ಕೇಂದ್ರ ಜಲಕೇಂದ್ರ ಹಾಗೂ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಮಾತ್ರವಲ್ಲ ಕರ್ನಾಟಕದಲ್ಲಿ ಎಲ್ಲೆಲ್ಲಿ ವಿಳಂಬವಾಗಿರುವ ರೈಲ್ವೆ ಯೋಜನೆಗಳ ಪರಿಶೀಲಿಸಿದ್ದೀನಿ. ರೈಲ್ವೆ ಮಂತ್ರಿಗಳ ಗಮನಕ್ಕು ತಂದಿದ್ದೀನಿ. ಇಪ್ಪತೆದು&ಮೂವತ್ತು ವರ್ಷದ ಅನೇಕ ಯೋಜನೆಗಳನ್ನು ನಮ್ಮ ಅವಧಿಯಲ್ಲೇ ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತಂದು ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಕೇಂದ್ರ ದೂರುವುದು ಸರಿಯಲ್ಲ: ರಾಜ್ಯದಲ್ಲಿ ಪೆಟ್ರೋಲ, ಡೀಸೆಲ್​ ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ದೂರುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಬುದ್ಧಿವಂತರಿದ್ದಾರೆ, ಯಾವುದೋ ಒತ್ತಡದಿಂದ ಒದ್ದಾಡ್ತಾ ಇದ್ದಾರೆ. ಬೆಲೆ ಏರಿಕೆ ನಿರ್ಧಾರ ಮನಸಿಗೆ ಸರಿ ಇದೆಯಾ ಅನ್ನುವುದನ್ನು ಅವರು ವೈಯಕ್ತಿಕವಾಗಿ ಹೇಳಿದರೆ ಸಾಕಾಗಿದೆ. ಪದೇಪದೇ ಕೇಂದ್ರ ಸರ್ಕಾರದತ್ತ ದೂರುವುದು ಸರಿಯಲ್ಲ ಎಂದು ಸೋಮಣ್ಣ ಹೇಳಿದರು.

ದಿಢೀರನೆ ಇಂಧನ ಬೆಲೆ ಏರಿಕೆ ಮಾಡಿದ್ದಾರೆ. ನಾನು ಒಬ್ಬ ಕೇಂದ್ರ ಮತ್ರಿಯಾಗಿ ಯಾವ ಮಟ್ಟಕ್ಕೆ ಮಾತನಾಡಬೇಕು ಅದನ್ನು ಮಾತ್ರ ಮಾತನಾಡುತ್ತೀನಿ. ಸಂಜಸವಾಗಿದೆಯೋ ಅನ್ನುವುದನ್ನು ಅವರೇ ತೀರ್ಮಾನ ಮಾಡಲಿ ಎಂದರು.

ಇಡೀ ದೇಶ, ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಯೋಗ ದಿನ ಆಚರಣೆ ಮಾಡಲಾಗುತ್ತಿದೆ. ಜಿಲ್ಲೆಯ ಇಬ್ಬರು ಸಚಿವರು ಬರಬೇಕಿತ್ತು. ಒಕ್ಕೂಟ ವ್ಯವಸ್ಥೆಯಲ್ಲಿ ನಾವಿದ್ದೀವಿ. ಎಲ್ಲರೂ ಯೋಗದಿನ ಆಚರಿಸುತ್ತಿದ್ದು ಸಚಿವರಿಬ್ಬರಿಗೂ ಆರೋಗ್ಯ ತುಂಬಾ ಚೆನ್ನಾಗಿದೆ ಅಂತಾ ಕಾಣಸುತ್ತೆ. ಅವರಿಗೆ ಒಳ್ಳೆಯದಾಗಲಿ ಎಂದು ತಿಳಿಸಿದರು.

ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರಿಗೆ ಪರಿಹಾರ ಕೊಡಿಸುವ ಸಂಬಂಧ ತಕ್ಷಣವೇ ಮಾತನಾಡುವೆ. ಅದಕ್ಕಿಂತ ದೊಡ್ಡ ಕೆಲಸ ಯಾವುದು ಇಲ್ಲ. ಇನ್ನೂ ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಸಭೆಯಲ್ಲಿ ಆಗಿರುವ ಚರ್ಚೆಯ ಮಾಹಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಜತೆ ಮಾತನಾಡಿ ಆ ನಂತರ ಪ್ರತಿಕ್ರಿಯಿಸುವೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net