ಕನ್ನಡದಲ್ಲಿ ಲೋಕೋ ಪೈಲೆಟ್​ ಹುದ್ದೆಗೆ ಮುಂಬಡ್ತಿ ಪರೀಕ್ಷೆ !

Somanna_Web
Published on

ತುಮಕೂರು: ನೈರುತ್ಯ ರೈಲ್ವೆ ವಲಯದಲ್ಲಿ ಇತ್ತೀಚೆಗೆ ಸಹಾಯಕ ಲೋಕೋ ಪೈಲೆಟ್​ ಹುದ್ದೆಗೆ ಮುಂಬಡ್ತಿ ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದ್ದು ಕೇವಲ ಇಂಗ್ಲೀಷ್​ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಪರೀೆ ಬರೆಯಲು ಅವಕಾಶ ನೀಡಲಾಗಿತ್ತು.

ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಕನ್ನಡಿಗರಿಂದ ಅನಾನುಕೂಲವಾಗುತ್ತಿದೆ ಎಂಬ ವಿಷಯ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಗಮನಕ್ಕೆ ಬಂದ ತಕ್ಷಣ ನೈರುತ್ಯ ರೈಲ್ವೆ ಮಹಾಪ್ರಬಂಧಕರಿಗೆ ಕನ್ನಡದಲ್ಲಿಯು ಪರೀಕ್ಷೆ ನಡೆಸಲು ಸೂಕ್ತ ಕ್ರಮಕೃಗೊಳ್ಳಲು ನಿರ್ದೇಶನ ನೀಡಿದ್ದಾರೆ.

ಇದರ ಫಲವಾಗಿ ಸಹಾಯಕ ಲೋಕೋ ಪೈಲಟ್​ ಹುದ್ದೆ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿಯು ನಡೆಸಲು ಇದೀಗ ನೈರುತ್ಯ ರೈಲ್ವೆ ವಲಯ ಕ್ರಮಕೃಗೊಂಡಿದೆ. ಸದ್ಯದಲ್ಲಿಯೇ ದಿನಾಂಕವನ್ನು ಮರುನಿಗದಿಪಡಿಸಿ ಪರೀಕ್ಷೆಯನ್ನು ನಡೆಸಲು ರೈಲ್ವೆ ಇಲಾಖೆ ಕ್ರಮವಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net