ಕುದೂರು: ತಿಪ್ಪಸಂದ್ರ ಹೋಬಳಿಯ ಜಾನಿಗೆರೆಯ ತೆಂಗಿನ ತೋಟದಲ್ಲಿ ಜೂಜಾಡುತ್ತಿದ್ದ ನಾಲ್ವರನ್ನು ಕುದೂರು ಪೊಲೀಸರು ಇತ್ತೀಚೆಗೆ ಬಂಧಿಸಿ, 2 ಕಾರು, ಒಂದು ಆಟೋ ಹಾಗೂ 1 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ.
ತುಮಕೂರು ನಗರದ ವೀರೇಶ್, ಪವನ್, ಹೆಬ್ಬೂರು ಹೋಬಳಿಯ ವನಸಿಗೆರೆಯ ಕಿರಣ್ ಕುಮಾರ್, ಗೂಳೂರು ಹೋಬಳಿ ಟಿ.ಜಿ.ಪಾಳ್ಯದ ತಿರುಮಲ್ಲಯ್ಯ ಬಂಧಿತರು. ಗೂಳೂರು ಹೋಬಳಿಯ ಬಿದರಕಟ್ಟೆಯ ಸಿದ್ದೇಗೌಡ, ಉಪ್ಪಾರಹಳ್ಳಿಯ ನಾಗೇಂದ್ರ, ತುಮಕೂರಿನ ವೆಂಕಟೇಶ್, ಕಿಟ್ಟಿ, ಹರ್ಷ, ಪುಟ್ಟಮಲ್ಲಿ, ರಂಗಸ್ವಾಮಿ, ಕುದೂರು ಹೋಬಳಿಯ ಮಲ್ಲಸಂದ್ರ ಗ್ರಾಮದ ಹನುಮಂತ ತಪ್ಪಿಸಿಕೊಂಡಿದ್ದು, ಆರೋಪಿತರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಕುದೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸರ್ದಾರ್ ಸಾಬ್ ಮತ್ತು ಸಿಬ್ಬಂದಿ ಸತೀಶ್, ಸೂರ್ಯಕುಮಾರ್, ನಾಗರಾಜು, ಶಿವರಾಜು, ಅಪ್ಪಾಸಾಬ್, ದರ್ಶನ್, ಮಧು, ಅಭಿಷೇಕ್ ದಾಳಿ ನಡೆಸಿದ್ದರು. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.