

ರಾಯಚೂರು: ಮನೆ ಮಾಲೀಕರನ್ನು ಕಟ್ಟಿ ಹಾಕಿ, ಸುತ್ತಮುತ್ತಲಿನ ಮನೆಗಳ ಬಾಗೀಲು ಲಾಕ್ ಮಾಡಿ ಮೂವರು ಕಳ್ಳರು ಕಳ್ಳತನ ಮಾಡಿರುವ ಘಟನೆ ನಗರದ ಆಶಾಪುರ ರಸ್ತೆಯ ಲಕ್ಷ್ಮೀ ನರಸಿಂಹ ಕಾಲನಿಯಲ್ಲಿ ಶನಿವಾರ ರಾತ್ರಿ ಜರುಗಿದೆ.
ಬಸನಗೌಡ ಎಂಬುವವರಿಗೆ ಸೇರಿದ್ದ ಮನೆಯಲ್ಲಿ ನಿನ್ನೆ ರಾತ್ರಿ ಕಳ್ಳತನವಾಗಿದೆ. ಮನೆಯ ಸುತ್ತಮುತ್ತಲಿನ ಬೀದಿ ದೀಪ, ಮತ್ತು ವಿದ್ಯುತ್ ಕಡಿತಗೊಳಿಸಿರುವ ಖದೀಮರು. ಬಸನಗೌಡ ಮನೆಯ ಅಕ್ಕಪಕ್ಕದ ಮನೆಗಳನ್ನು ಹೊರಗಿನ ಲಾಕ್ ಮಾಡಿ ನಂತರ ಬಸನಗೌಡ ಅವರ ಮನೆಯ ಬಾಗೀಲನ್ನು ದೊಡ್ಡ ಕಲ್ಲಿನಿಂದ ಹೊಡೆದು ಮುರಿದಿದ್ದಾರೆ.
ಇದನ್ನೂಓದಿ: ಜುವೆಲ್ಲರಿ ಶಾಪ್ ಕಳ್ಳತನಕ್ಕೆ ಯತ್ನ
ನಂತರ ರಾಜಾರೋಷವಾಗಿ ಮನೆಯ ಒಳನುಗ್ಗಿ ಮನೆಯಲ್ಲಿ ವಾಸಿಸುತ್ತಿದ್ದ ಎಲ್ಲರ ಕೈ ಕಾಲು ಕಟ್ಟಿ ಹಾಗೂ ಬಾಯಿಯನ್ನು ಮುಚ್ಚಿದ್ದಾರೆ. ಮನೆಯಲ್ಲಿದ್ದ ಎರಡು ಲಕ್ಷ ನಗದು, 22ತೊಲೆ ಚಿನ್ನ ಎರಡು ಕೆಜಿ ಬೆಳ್ಳಿ ಸೇರಿದಂತೆ ಮನೆಯ ಮಹಿಳೆಯರ ಮೈಮೇಲಿನ ಒಡವೆ, ದೇವರ ಮನೆಯಲ್ಲಿದ್ದ ಬೆಳ್ಳಿ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಮೂರು ಜನ ಖದೀಮರು ಕಪ್ಪು ಬಟ್ಟೆ ಹಾಗೂ ಕಪ್ಪು ಮಾಸ್ಕ್ ಧರಿಸಿದ್ದು, ಕಳ್ಳರ ಚಲನ ವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೂರ್ವ ನಿಯೋಜಿತ ಕೃತ್ಯವೆಂದು ಹೇಳಲಾಗುತ್ತಿದ್ದು, ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.