ಬೆಂಗಳೂರು: ಜುವೆಲ್ಲರಿ ಅಂಗಡಿಯೊಂದರ ಕಬ್ಬಿಣದ ಶೆಟರ್ ಬಾಗಿಲು ಮುರಿದು ಕಳತನಕ್ಕೆ ಯತ್ನಿಸಲಾಗಿದೆ.
ಬನಶಂಕರಿ ೨ನೇ ಹಂತದ ಬಿಡಿಎ ಕಾಂಪ್ಲೆಕ್ಸ್ ಎದುರಿನ ೨೧ನೇ ಮುಖ್ಯರಸ್ತೆಯ ರಾಜಲಕ್ಷ್ಮೀ ಜುವೆಲ್ಲರಿ ಅಂಗಡಿಯಲ್ಲಿ ಸೆ.೫ರಂದು ಮುಂಜಾನೆ ೧ ಗಂಟೆಯಿಂದ ೨ ಗಂಟೆ ನಡುವೆ ಈ ಘಟನೆ ನಡೆದಿದೆ. ಜುವೆಲ್ಲರಿ ಅಂಗಡಿ ಮಾಲೀಕ ಗೋದಾರಾಮ್ ಚೌಧರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆ.೫ರಂದು ಮುಂಜಾನೆ ಸುಮಾರು ೧ ಗಂಟೆಗೆ ಇಬ್ಬರು ದುಷ್ಕರ್ಮಿಗಳು ರಾಜಲಕ್ಷ್ಮೀ ಜುವೆಲ್ಲರಿ ಅಂಗಡಿ ಬಳಿ ಬಂದಿದ್ದಾರೆ. ಬಳಿಕ ತಾವು ತಂದಿದ್ದ ಚಿಕ್ಕ ಬ್ಯಾಗ್ನಿಂದ ಚಿಕ್ಕ ಗ್ಯಾಸ್ ಕಟರ್ ತೆಗೆದು ಜುವೆಲ್ಲರಿ ಅಂಗಡಿ ಶೆಟರ್ ಬಾಗಿಲು ಕತ್ತರಿಸಲು ಮುಂದಾಗಿದ್ದಾರೆ. ಇದೇ ಸಮಯಕ್ಕೆ ಪಕ್ಕದ ಅಂಗಡಿಯಲ್ಲಿ ಮಲಗಿದ್ದ ಯುವಕರು ಎಚ್ಚರಗೊಂಡು ಹೊರಗೆ ಬಂದು ನೋಡಿದಾಗ ಜುವೆಲ್ಲರಿ ಅಂಗಡಿ ಬಾಗಿಲ ಬಳಿ ಬೆಳಕು ಕಾಣಿಸಿದೆ. ಈ ವೇಳೆ ಆ ಯುವಕರು ಕಳ್ಳ ಕಳ್ಳ ಎಂದು ಜೋರಾಗಿ ಕೂಗಿದ್ದಾರೆ. ಇದರಿಂದ ಗಾಬರಿಗೊಂಡು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಜುವೆಲ್ಲರಿ ಅಂಗಡಿ ಶೆಟರ್ ಬಾಗಿಲು ಕತ್ತರಿಸುವ ದೃಶ್ಯ ಘಟನಾ ಸ್ಥಳದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಜುವೆಲ್ಲರಿ ಅಂಗಡಿ ಮಾಲೀಕ ನೀಡಿದ ದೂರಿನ ಮೇರೆಗೆ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುವೆಲ್ಲರಿ ಶಾಪ್ ಕಳ್ಳತನಕ್ಕೆ ಯತ್ನ
You Might Also Like
ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips
ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…
ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…
ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…
ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower
ಬೆಂಗಳೂರು: ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…