

ರಾಯಚೂರು: ರಾಜ್ಯ ಸರ್ಕಾರ ಶಾಲಾ ಶಿಕ್ಷಕರ ಅಂತರ್ ವಿಭಾಗ ವರ್ಗಾವಣೆಯ ಕೌನ್ಸಿಲಿಂಗ್ ನಡೆಸಿದ್ದರೂ. ಶಿಕ್ಷಕರಿಗೆ ಏಕಕಾಲಕ್ಕೆ ಬಿಡುಗಡೆ ಆದೇಶ ನೀಡದೇ ಇಲಾಖೆಯ ಅಧಿಕಾರಿಗಳು ಪ್ರತ್ಯೇಕ ಆದೇಶ ನೀಡುತ್ತಾ ಅನಗತ್ಯ ವಿಳಂಬ ಮಾಡುತ್ತಿದ್ದರು ಈ ಬಗ್ಗೆ ವಿಜಯವಾಣಿಯಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೆ ಇದೀಗ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ ಬಡಿಗೇರ್ ಶಿಕ್ಷಕರಿಗೆ ಏಕಕಾಲಕ್ಕೆ ತಾಲೂಕುವಾರು ಚಲನ ಆದೇಶ ನೀಡಿದ್ದಾರೆ.
ಕೌನ್ಸಿಲಿಂಗ ಪೂರ್ಣಗೊಂಡರೂ. ಚಲನ ಆದೇಶ ಸಿಗದೇ ಶಿಕ್ಷಕರು ಪರದಾಡುತ್ತಿದ್ದರು ಈ ಬಗ್ಗೆ ಸೆ.12ರಂದು ವಿಜಯವಾಣಿಯಲ್ಲಿ ‘ವರ್ಗವಾದರೂ ಬಿಡುಗಡೆ ಭಾಗ್ಯವಿಲ್ಲ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. 250 ಕ್ಕೂ ಹೆಚ್ಚಿನ ಶಿಕ್ಷಕರು ವರ್ಗಾವಣೆಯ ಚಲನ ಆದೇಶವಿಲ್ಲದೇ ಸಂಕಷ್ಟದಲ್ಲಿದ್ದರು. ಸುದ್ದಿ ಪ್ರಕಟವಾದ ಬೆನ್ನಲ್ಲೆ ಎಚ್ಚೆತ್ತುಕೊಂಡ ಇಲಾಖೆ ಕೌನ್ಸಿಲಿಂಗ ಪೂರ್ಣಗೊಳಿಸಿದ ಎಲ್ಲ ಶಿಕ್ಷಕರಿಗೆ ತಾಲೂಕುವಾರು ಚಲನ ಆದೇಶ ನೀಡಿದೆ.