'ಸಂಘರ್ಷದ ಹಾದಿಯಲ್ಲಿ' ಕೃತಿ ಲೋಕಾರ್ಪಣೆ: ವೆಂಕಟೇಶ್ ಬೇವಿನಬೆಂಚಿ

Venkatesh bevinabenchi
ವೆಂಕಟೇಶ ಬೇವಿನಬೆಂಚಿ
Published on

ರಾಯಚೂರು: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ರಚಿಸಿದ ಸಂಘರ್ಷದ ಹಾದಿಯಲ್ಲಿ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ವೆಂಕಟೇಶ್ ಬೇವಿನಬೆಂಚಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಆ.18ರಂದು ಬೆಳಿಗ್ಗೆ 10.30ಕ್ಕೆ ನಗರದ ಕನ್ನಡ ಭವನದಲ್ಲಿ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಹಿರಿಯ ಸಾಹಿತಿ ಬಿ.ಜಿ ಹುಲಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಸಾಹಿತಿ ಡಾ.ದಸ್ತಗಿರಿಸಾಬ್ ದಿನ್ನಿ ಕೃತಿ ಪರಿಚಯಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಭಗತ್‌ರಾಜ್ ನಿಜಾಂಕಾರಿ, ಹೋರಾಟಗಾರ ಸಿ.ದಾನಪ್ಪ ಮಸ್ಕಿ, ಸಾಹಿತಿಗಳಾದ ರಾಮಣ್ಣ ಹವಳೆ, ಅಯ್ಯಪ್ಪಯ್ಯ ಹುಡಾ, ಜೆಎಲ್ ಈರಣ್ಣ, ಎಸ್.ಮಾರೆಪ್ಪ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃತಿಯ ರಚನಾಕಾರ ಬಾಬು ಭಂಡಾರಿಗಲ್, ಪ್ರಮುಖರಾದ ವಿಜಯರಾಜೇಂದ್ರ, ತಾಯಪ್ಪ ಹೊಸೂರ್, ರೇಖಾ ಬಡಿಗೇರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net