ಪತ್ನಿಯಿಂದಲೇ ಪೊಲೀಸ್ ಪೇದೆ ವಿರುದ್ಧ ಎಫ್‌ಐಆರ್

Raj mohammad
ರಾಜ್ ಮೊಹಮ್ಮದ್
Published on

ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣದ ಪೊಲೀಸ್ ಕಾನ್ಸ್‌ಟೇಬಲ್ ರಾಜ್ ಮೊಹಮ್ಮದ್ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ರಾಜ್‌ಮೊಹಮ್ಮದ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಇತ್ತೀಚೆಗೆ ಸಿರವಾರದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ರಾಜ್ ಮೊಹಮ್ಮದ್ ಎಂಬಾತ ಪ್ರೇಯಸಿ ಸರಳ ಎನ್ನುವವರ ಜತೆಗೆ ಮನೆಯಲ್ಲಿರುವಾಗ ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ. ಹೆಂಡತಿ ಪ್ಯಾರಿ ಬೇಗಂ ದೇವದುರ್ಗ ಠಾಣೆಯ ಮಹಿಳಾ ಪೇದೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು ಇದಾದ ಬಳಿಕ ಪ್ಯಾರಿ ಬೇಗಂ ಶುಕ್ರವಾರ ರಾಯಚೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಮದುವೆಯಾದಾಗಿನಿಂದಲೂ ಮಾನಸಿಕ, ದೈಹಿಕ ಹಾಗೂ ಆರ್ಥಿಕವಾಗಿ ಕಿರುಕುಳ ನೀಡುತ್ತಿದ್ದ, ತವರು ಮನೆಯಿಂದ 5 ಲಕ್ಷ ರೂ.ಹಣ ತರುವಂತೆ ಒತ್ತಾಯಿಸುತ್ತಿದ್ದನಲ್ಲದೇ ಮೂರು ಬಾರಿ ಕೊಲೆಗೆ ಯತ್ನಿಸಿದ್ದಾನೆ. ಸರಳ ಎನ್ನುವ ಮಹಿಳೆಯೊಂದಿಗೆ ರಾಜ್ ಮೊಹಮ್ಮದ್ ಅಕ್ರಮ ಸಂಬಂಧವನ್ನು ಹೊಂದಿದ್ದಾನೆ ಎಂದು ಪ್ಯಾರಿ ಬೇಗಂ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net