More

    ಸಿರವಾರದಲ್ಲಿ ಹೆಚ್ಚುತ್ತಿದೆ ಖದೀಮರ ಕೈಚಳಕ

    ಸಿರವಾರ: ಪಟ್ಟಣ ಸೇರಿದಂತೆ ತಾಲೂಕಿನ ಹಳ್ಳಿಗಳಲ್ಲಿ ಹಲವು ದಿನಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸ್ ಇಲಾಖೆ ಗಾಡ ನಿದ್ದೆಗೆ ಜಾರಿದೆ.

    ತಾಲೂಕಿನ ನೀಲೊಗಲ್ ಕ್ಯಾಂಪ್‌ನ ಹತ್ತಿರದ ಗೋಡೌನ್‌ನಲ್ಲಿ ಸಂಗ್ರಹಿಸಿಟ್ಟಿದ್ದ 3 ಲಕ್ಷ ರೂ. ಮೌಲ್ಯದ ಕುಸುಬೆ ಕಳ್ಳತನವಾಗಿದೆ. ಜಕ್ಕಲದಿನ್ನಿ ಗ್ರಾಮದ ಮನೆಯಲ್ಲಿ 1 ಲಕ್ಷ ರೂ ನಗದು, ಬಂಗಾರ, ಕುರಕುಂದ ಗ್ರಾಮದಲ್ಲಿ ಯಲ್ಲಮ್ಮ ದೇವಸ್ಥಾನ ಕಳ್ಳತನ, ಗೊಲದಿನ್ನಿ ಗ್ರಾಮದ ಮನೆಯಲ್ಲಿ 9 ಲಕ್ಷ ರೂ. 3 ತೊಲ ಬಂಗಾರ, ಕುರಕುಂದ ಹಾಗೂ ಬುಳ್ಳಾಪುರ ಗ್ರಾಮದ ಸುತ್ತಲಿನ ಹೊಲಗಳಲ್ಲಿ ರೈತರು ಅಳವಡಿಸಿದ ಪಂಪ್‌ಸೆಟ್‌ಗಳನ್ನು ಖದೀಮರು ಕಳ್ಳತನ ಮಾಡುವುದರ ಮೂಲಕ ರೈತರ ನಿದ್ದೆಗೆಡಿಸಿದ್ದಾರೆ.

    ಇದನ್ನೂ ಓದಿ: ‘ಮೊಬೈಲ್ ಕ್ಲಿನಿಕ್’ ವೈದ್ಯ-ಸಿಬ್ಬಂದಿಗೆ ಅಭಿನಂದನೆ

    ಕಳೆದ ಎರಡು ದಿನದಲ್ಲಿ ಮಾಚನೂರು ಗ್ರಾಮದಲ್ಲಿ ಅಳವಡಿಸಿರುವ ಮೊಬೈಲ್ ಟವರ್‌ನ 70 ಸಾವಿರ ರೂ. ಮೌಲ್ಯದ 20 ಬ್ಯಾಟರಿಗಳು ಕಳ್ಳತನ ಮಾಡಲಾಗಿದೆ. ಅದೇ ರಾತ್ರಿ ಚಾಗಭಾವಿ, ಹರವಿ ಗ್ರಾಮದಲ್ಲಿ ಅಳವಡಿಸಿದ್ದ ಟವರ್‌ನ ಬ್ಯಾಟರಿಗಳ ರೂಂನ ಬೀಗ ಮುರಿದು ಕಳ್ಳತನಕ್ಕೆ ಯತ್ನ ನಡೆದಿದೆ. ಈ ಕಳ್ಳತನದಲ್ಲಿ ಕೆಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲು ತಡ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಅಂಗಡಿಗಳ ಮಾಲೀಕರಿಗೆ ಪೊಲೀಸ್ ಇಲಾಖೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತಿದೆ. ಯಾವುದೇ ಕಳ್ಳತನವಾದರೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಅನೇಕ ದಿನಗಳ ಕಾಲ ಠಾಣೆಗೆ ಅಲೆಯಬೇಕಾಗಿದೆ. ಕಳೆದ ಕೆಲವು ದಿನಗಳಲ್ಲೆ ಇಷ್ಟು ಕಳ್ಳತ ನಡೆಯುತ್ತಿದ್ದರೂ ಪೋಲಿಸರು ಏನು ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ಹೆಸರಿಗಷ್ಟ್ಟೆ ಸಭೆ

    ಎಸ್ಸಿ, ಎಸ್ಟಿ ಕುಂದು ಕೊರತೆಗಳ ಸಭೆಗಳನ್ನು ಮಾಡಬೇಕು ಎಂದು ಮೇಲಧಿಕಾರಿಗಳ ಆದೇಶ ಬಂದರೆ ಕೇವಲ ಕೆಲವೆ ನಾಯಕರನ್ನು ಕರೆದು ಕಾಟಾಚಾರಕ್ಕೆ ಸಭೆಗಳನ್ನು ಮಾಡುತ್ತಾರೆ. ಅನಕ್ಷರಸ್ಥರು, ಅನ್ಯಾಯಕ್ಕೆ ಒಳಗಾದವರು, ಕಾನೂನಿನ ಅರಿವು ಇಲ್ಲದವರಿಗೆ ಸಭೆ ನಡೆಸಿ ಅರಿವು ಮೂಡಿಸಬೇಕು. ಆದರೆ, ಪೊಲೀಸ್ ಇಲಾಖೆಯು ಶಿಕ್ಷಕಿಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರೊಂದಿಗೆ ಸಭೆ ನಡೆಸುತ್ತಿದೆ ಎಂಬ ಆರೋಪವಿದೆ.

    ದಾಖಲಾದ ಕಳ್ಳತನ ಪ್ರಕರಣಗಳನ್ನು ಹಂತ ಹಂತವಾಗಿ ತನಿಖೆ ಮಾಡಬೇಕು. ಏಕಾಏಕಿ ಯಾರನ್ನು ಏನು ಮಾಡುವುದಕ್ಕೆ ಬರುವುದಿಲ್ಲ. ಈಗಾಗಲೇ ಒಂದು ಹಂತದಲ್ಲಿ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು.


    ಅವಿನಾಶ್ ಕಾಂಬಳೆ


    ಪಿಎಸ್‌ಐ, ಸಿರವಾರ.

    ಮಾಚನೂರು ಗ್ರಾಮದ ಇಂಡಸ್ ಕಂಪನಿಯ ಟವರ್‌ನಲ್ಲಿ 20 ಬ್ಯಾಟರಿ ಸೆಲ್‌ಗಳು ಕಳ್ಳತನವಾಗಿವೆ. ಎರಡು ದಿನದಿಂದ ಪ್ರಕರಣ ದಾಖಲಿಸುವಂತೆ ಠಾಣೆಗೆ ಬಂದರೂ ಯಾವುದೇ ಪ್ರಕರಣ ದಾಖಲಿಸುತ್ತಿಲ್ಲ.


    ಬಸಪ್ಪ


    ಕಾನೂನು ಸಲಹೆಗಾರರು, ಇಂಡಸ್ ಕಂಪನಿ ಅಧಿಕಾರಿ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts