ಮಂತ್ರಾಲಯ ಮಠಕ್ಕೆ 3.69 ಕೋಟಿ ರೂ. ಆದಾಯ

Mantralayam
ಮಂತ್ರಾಲಯದ ರಾಯರ ಮಠದಲ್ಲಿ ಹುಂಡಿಯಲ್ಲಿನ ಕಾಣಿಕೆಯನ್ನು ಎಣಿಕೆ ಮಾಡುತ್ತಿರುವುದು.
Published on

ರಾಯಚೂರು/ಮಂತ್ರಾಲಯ: ದೇಶದ ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯಕ್ಕೆ ಮೂರುವರೆ ಕೋಟಿ ರೂಪಾಯಿಗೂ ಹೆಚ್ಚಿನ ಆದಾಯ ಹುಂಡಿಯಿಂದ ಸಂಗ್ರಹವಾಗಿದೆ.

ಜುಲೈ ತಿಂಗಳಾಂತ್ಯಕ್ಕೆ ಶ್ರೀಮಠದ ಅಧಿಕಾರಿಗಳು ಸೋಮವಾರ ಹುಂಡಿ ತೆರೆದು ಎಣಿಕೆ ನಡೆಸಿದ್ದು ಒಟ್ಟು 3,69,35,189 ರೂಪಾಯಿ ಭಕ್ತರು ದೇಣಿಗೆ ಸಲ್ಲಿಸಿರುವುದು ಗೊತ್ತಾಗಿದೆ.

ಇದಲ್ಲದೇ ಹುಂಡಿಯಲ್ಲಿ 75.200 grams ಚಿನ್ನ ಮತ್ತು 1.900 ಕೆ.ಜಿ ಬೆಳ್ಳಿ ಸಹ ಭಕ್ತರು ರಾಯರಿಗೆ ಹರಕೆಯ ರೂಪದಲ್ಲಿ ಹುಂಡಿಗೆ ಕಾಣಿಕೆ ಸಲ್ಲಿಸಿದ್ದಾರೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಇದೇ ವರ್ಷದ ಜನವರಿಯಲ್ಲಿ 4ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತ ಹುಂಡಿಯಲ್ಲಿ ಭಕ್ತರು ಕಾಣಿಕೆಯಾಗಿ ನೀಡಿದ್ದರು. ಆನಂತರವೂ ಪ್ರತಿ ತಿಂಗಳೂ ಸರಾಸರಿ 2 ರಿಂದ ಮೂರು ಕೋಟಿ ರೂಪಾಯಿ ನಗದು ಹುಂಡಿಯಲ್ಲಿ ಹಾಕಿರುವುದು ಗೊತ್ತಾಗಿತ್ತು. ಬೇಸಿಗೆಯ ಶಾಲಾ ಕಾಲೇಜುಗಳ ರಜೆ ಅವಧಿಯಲ್ಲಿ ಹುಂಡಿಯ ಸಂಗ್ರಹಣೆ ಮೊತ್ತವು ತುಸು ತಗ್ಗಿತ್ತಾದರೂ ಜೂನ್ ಹಾಗೂ ಜುಲೈ ತಿಂಗಳಲ್ಲಿ ಮತ್ತೆ ಏರಿಕೆ ಕಂಡಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net