ಮಂತ್ರಾಲಯದಲ್ಲಿ ಅದ್ದೊರಿಯಾಗಿ ಜರುಗಿದ ಮೃತ್ತಿಕಾ ಸಂಗ್ರಹಣಾ ಮಹೋತ್ಸವ

MANTRALAYA
ಮಂತ್ರಾಲಯದ ತುಳಸಿ ವನದಲ್ಲಿ ಆಷಾಡ ಶುದ್ಧ ಪೂರ್ಣಿಮೆ ಅಂಗವಾಗಿ ಪೀಠಾಧಿಪತಿ ಸುಬುದೇಂದ್ರ ತೀರ್ಥರು ಮೃತ್ತಿಕಾ ಸಂಗ್ರಹಣೆ ಮಹೋತ್ಸವದ ಧಾರ್ಮಿಕ ವಿಧಿವಿಧಾನ ನೆರವೇರಿಸುತ್ತಿರುವುದು. ಶ್ರೀಮಠದ ಸಿಬ್ಬಂದಿ ಇದ್ದರು.
Published on

ರಾಯಚೂರು/ಮಂತ್ರಾಲಯ: ಆಷಾಢ ಶುಧ ಗುರುಪೂರ್ಣಿಮಾ ಅಂಗವಾಗಿ ಮಂತ್ರಾಲಯದಲ್ಲಿ ಮೃತ್ತಿಕಾ ಸಂಗ್ರಹಣಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು.
ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ತುಳಸಿವನಕ್ಕೆ ಭವ್ಯ ಮೆರವಣಿಗೆಯಲ್ಲಿ ಭೇಟಿ ನೀಡಿದರು. ನಂತರ ಮೃತ್ತಿಕಾ ಸಂಗ್ರಹಣಾ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಮಂತ್ರಾಲಯದ ತುಳಸಿ ವನಕ್ಕೆ ಮೆರಣಿಗೆ ಮೂಲಕ ಆಗಮಿಸುತ್ತಿರುವ ಶ್ರೀ ಸುಬುದೇಂದ್ರ ತೀರ್ಥರು.
ಮಂತ್ರಾಲಯದ ತುಳಸಿ ವನಕ್ಕೆ ಮೆರಣಿಗೆ ಮೂಲಕ ಆಗಮಿಸುತ್ತಿರುವ ಶ್ರೀ ಸುಬುದೇಂದ್ರ ತೀರ್ಥರು.

ಮಠ ಮತ್ತು ತುಂಗಭದ್ರಾ ನದಿಯ ನಡುವೆ ಇರುವ ತುಳಸಿ ವನ(ಉದ್ಯಾನ)ದಿಂದ ಮೃತ್ತಿಕಾವನ್ನು ಸಂಗ್ರಹಿಸಿದರು. ಈ ಮೃತ್ತಿಕಾವನ್ನು ಶ್ರೀ ರಾಘವೇಂದ್ರ ಸ್ವಾಮಿಗಳವರ ಸನ್ನಿದಾನಕ್ಕೆ ಸುವರ್ಣ ಪಲ್ಲಕಿಯಲ್ಲಿ ತಂದು ಬೃಂದಾವನದ ಮೇಲ್ಭಾಗದಲ್ಲಿ ಇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net