

ರಾಯಚೂರು: ಮಗಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಬೇಕಿದ್ದ ತಂದೆಯೇ ಆಕೆಯ ಜೀವಕ್ಕೆ ಕೊಡಲಿ ಇಟ್ಟ ಅಮಾನವೀಯ ಘಟನೆ ಲಿಂಗಸಗೂರು ತಾಲೂಕಿನ ಯರಜಂತಿ ಗ್ರಾಮದಲ್ಲಿ ನಡೆದಿದೆ.
ಮೋನಮ್ಮ (14) ತಂದೆ ತಿಮ್ಮಯ್ಯನ ಕ್ರೂರತೆಗೆ ಬಲಿಯಾದ ಬಾಲಕಿ. ಇಂದು (ಫೆ.22) ಬೆಳಗ್ಗೆ ಮನೆಯ ಮುಂದೆ ಪಾತ್ರೆ ತೊಳೆಯುವಾಗ ಏಕಾಏಕೀ ಮಗಳನ್ನು ಕೊಡಲಿಯಿಂದ ಕೊಚ್ಚಿ ತಿಮ್ಮಯ್ಯ ಕೊಲೆಗೈದಿದ್ದಾನೆ.
ತನ್ನ ಮಾತು ಕೇಳಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮಗಳನ್ನೆ ಕೊಲೆ ಮಾಡಿರುವ ತಿಮ್ಮಯ್ಯ ಇದೀಗ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಲಿಂಗಸೂಗೂರು ಡಿವೈಎಸ್ಪಿ ಹಾಗೂ ಸಿಪಿಐ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಾಗಿ ತೀವ್ರ ಹುಡುಕಾಟ ಶುರುವಾಗಿದೆ. (ದಿಗ್ವಿಜಯ ನ್ಯೂಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ