ಆ.29ರಿಂದ ಹಾಕಿ ಪಂದ್ಯಾವಳಿ: ಜಯಪ್ರಕಾಶ ರೆಡ್ಡಿ

Jayaprakash reddy
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಜಯಪ್ರಕಾಶ ರೆಡ್ಡಿ ಹಾಕಿ ಪಂದ್ಯದ ಕುರಿತು ಮಾತನಾಡಿದರು.
Published on

ರಾಯಚೂರು: ಹಾಕಿ ರಾಯಚೂರು ವತಿಯಿಂದ ಹಾಕಿ ಮಾಂತ್ರಿಕ ಧ್ಯಾನಚಂದ್ ಅವರ 119ನೇ ಜನ್ಮದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಉಪಾಧ್ಯಕ್ಷ ಜಯಪ್ರಕಾಶ ರೆಡ್ಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಆ.29ರಿಂದ 30ರವರೆಗೆ ನಗರದ ಮಹತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದ ಬಾಸ್ಕೆಟ್ ಬಾಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ 5 ಜನ ಕ್ರೀಡಾಪಟುಗಳನ್ನು ಹೊಂದಿದ ಪುರುಷ ಹಾಗೂ ಮಹಿಳೆಯರ 24 ತಂಡಗಳು ಭಾಗವಹಿಸಲಿವೆ ಎಂದರು.

ಹಾಕಿ ಕ್ರೀಡೆ ಮಾಯವಾಗುತ್ತಿದ್ದು, ಕ್ರೀಡೆಯನ್ನು ಪ್ರೋತ್ಸಾಹಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಪ್ರಥಮ ಬಹುಮಾನ ಪಡೆದ ತಂಡಕ್ಕೆ 10 ಸಾವಿರ ನಗದು ಹಾಗೂ ಟ್ರೋಪಿ ಸಿಗಲಿದೆ. ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 5 ಸಾವಿರ ನಗದು ಹಾಗೂ ಟ್ರೋಪಿ ವಿತರಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಹನುಮಂತಪ್ಪ, ಅರ್ಜುನ್, ಮೃತ್ಯುಂಜಯ, ಭಗತ್ ಸಿಂಗ್, ರಂಗನಾಥ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net