ಗೋವಿಂದ ಗಾನದಲ್ಲಿ ದಾಸವಾಣಿ ಜುಗಲ್ಬಂದಿ

IMG-20240921-WA0020
Published on

ರಾಯಚೂರು: ಹರಿದಾಸ ಸೇವಾ ಇಂಟರ್ ನ್ಯಾಷನಲ್ ಟ್ರಸ್ಟ್ ಹಾಗೂ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವ ದಶಮಾನೋತ್ಸವ ಹಿನ್ನೆಲೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಶ್ರೀವಾರಿ ಊಂಜಲ ಉತ್ಸವ ಹಾಗೂ ಗೋವಿಂದ ಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಹಿರಿಯ ಸಾಹಿತಿ ವಾಸುದೇವ ಅಗ್ನಿಹೋತ್ರ ಅವರಿಗೆ ಸಿರಿ ಗೋವಿಂದ ವಿಠಲ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಿಂದ ಅತ್ಯಾಕ್ಷರಿ, ದಾಸವಾಣಿ ಜುಗಲ್ಬಂದಿ, ಸಮೂಹ ಗಾಯನ, ಭಜನೆ, ದಾಸರ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಗೋವಿಂದ ಗಾನ ಕಾರ್ಯಕ್ರಮದ ಅಧ್ಯಕ್ಷ ರಾಯಚೂರು ಶೇಷಗಿರಿದಾಸ, ಪಂಚಮುಖಿ ಗಾಣದಾಳ ಅರ್ಚಕ ಶಾಮಾಚಾರ, ಪ್ರಮುಖರಾದ ತ್ರಿವಿಕ್ರಮ ಜೋಷಿ, ಜಗನ್ನಾಥ ಕುಲಕರ್ಣಿ, ಎಂ.ಆರ್ ಸತೀಶ, ಪ್ರಹ್ಲಾದ್ ಕುಲಕರ್ಣಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net